newsics.com
ನವದೆಹಲಿ: ಆನ್‌ಲೈನ್‌ನಲ್ಲಿ ಗ್ರಾಹಕರ ಸುರಕ್ಷತೆಯ ಭಾಗವಾಗಿ ಇನ್ಮುಂದೆ ನೀವು ನಿಮ್ಮ ಮುಖದ ಚಹರೆ ಹಾಗೂ ಫಿಂಗರ್ ಪ್ರಿಂಟ್ ಮೂಲಕವೇ ಯುಪಿಐ ಪಾವತಿ ಮಾಡಬೇಕಾಗುತ್ತದೆ.
ಇಂದಿನಿಂದ (ಅಕ್ಟೋಬರ್ 8) ಫೇಶಿಯಲ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ಯುಪಿಐ ಏಕೀಕೃತ ಪಾವತಿ ಇಂಟರ್ಫೇಸ್ (Unified Payments Interface-UPI) ಪಾವತಿ ಮಾಡಲು ಅವಕಾಶ ಕಲ್ಪಿಸಿದೆ.
ಭಾರತ ಸರ್ಕಾರದ ವಿಶಿಷ್ಟ ಗುರುತಿನ ವ್ಯವಸ್ಥೆ – ಆಧಾರ್ ಅಡಿಯಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು ದೃಢೀಕರಣವನ್ನು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಕ್ರಮವು ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ.
ಪೇಮೆಂಟ್ ದೃಢೀಕರಣ ಮಾಡಲು ಪರ್ಯಾಯ ವಿಧಾನಗಳಿಗೆ ಅನುಮತಿ ನೀಡಬೇಕು. ಪಾವತಿ ದೃಢೀಕರಣ ಮಾಡಲು ಈಗಿನ ಪಿನ್ ವ್ಯವಸ್ಥೆ ಬದಲಿಗೆ ಮುಖ ಚಹರೆ, ಫಿಂಗರ್ ಪ್ರಿಂಟ್ ಬಳಸುವ ವ್ಯವಸ್ಥೆ ಜಾರಿಗೆ ಅರ್‌ಬಿಐ ಸೂಚಿಸಿದೆ.
ಯುಪಿಐನ್ನು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಈ ಹೊಸ ಬಯೋಮೆಟ್ರಿಕ್ ವೈಶಿಷ್ಟ್ಯವನ್ನು ಪ್ರದರ್ಶಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೇ ನಿಲ್ಲುತ್ತಾ? ಮನೆ ನಿರ್ಮಾಣಕ್ಕೆ ಆಗಿರುವ ಖರ್ಚು ಎಷ್ಟು?
Viral ಬಟ್ಟೆ ಒಗೆಯುತ್ತಿದ್ದಾಗ ಮಹಿಳೆಯನ್ನ ಎಳೆದೊಯ್ದ ಮೊಸಳೆ : ವೈರಲ್ ವಿಡಿಯೋ ನೋಡಿ