Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಏಷ್ಯಾಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಆಟಗಾರನಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ನೀಡಲಾಗಿತ್ತು. ಆದರೀಗ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಬಿಕ್ಕಟ್ಟು ಎದುರಾಗಿದೆ.
ಅಭಿಷೇಕ್ ಶರ್ಮಾಗೆ ಸಿಕ್ಕಿರುವ HAVAL H9 SUV ಎಡಗೈ ಡ್ರೈವ್ ಆವೃತ್ತಿಯಾಗಿದೆ. ಭಾರತದಲ್ಲಿ ಎಡಗೈ ಡ್ರೈವಿಂಗ್ ವಾಹನಕ್ಕೆ ಅನುಮತಿ ಇಲ್ಲ. ಭಾರತದಲ್ಲಿ ಬಲಗೈ ಡ್ರೈವಿಂಗ್ ವಾಹನಗಳು ಮಾತ್ರ ಓಡುತ್ವೆ.
ಭಾರತದ ರಸ್ತೆ ಸುರಕ್ಷತೆ ಮತ್ತು ವಾಹನ ನೋಂದಣಿ ಕಾಯ್ದೆಯಡಿಯಲ್ಲಿ, ಅಭಿಷೇಕ್ ಶರ್ಮಾಗೆ ಸಿಕ್ಕಿರುವುದು ಎಡಗೈ ಡ್ರೈವ್ (LHD) ಕಾರ್. ಹವಾಲ್ H9 SUV ಕಾರಿನ ಸ್ಟೇರಿಂಗ್ ಎಡ ಭಾಗದಲ್ಲಿದೆ. ಹೀಗಾಗಿ ಈ ಕಾರನ್ನು ಭಾರತದಲ್ಲಿ ನೋಂದಾಯಿಸಲು ಹಾಗೂ ಓಡಿಸಲು ಅವಕಾಶವಿಲ್ಲ. ಇದೇ ಕಾರಣದಿಂದಾಗಿ ಅಭಿಷೇಕ್ ಶರ್ಮಾ ಇನ್ನೂ ಸಹ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಕಾರನ್ನು ಭಾರತಕ್ಕೆ ತಂದಿಲ್ಲ ಎಂದು ತಿಳಿದು ಬಂದಿದೆ.