Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್- 12 ಇಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು ಯಾರು ಎನ್ನುವುದು ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಬಿಗ್ಬಾಸ್ ಹೌಸ್ ಒಳಗೆ ಹೋಗುವ ಕಂಟೆಸ್ಟೆಂಟ್ಗಳನ್ನು ಕಿಚ್ಚ ಸುದೀಪ್ ಅವರು ಇಂದು ಪರಿಚಯ ಮಾಡಿಕೊಡಲಿದ್ದಾರೆ.
ಇದೀಗ ದೊಡ್ಮನೆಗೆ ಮುದ್ದುಲಕ್ಷ್ಮೀ’ ನಟಿ ಅಶ್ವಿನಿ ಎಂಟ್ರಿ ಕೊಟ್ಟಿದ್ದಾರೆ.ಡಿಗ್ರಿ ಮುಗಿಸಿದಕೂಡಲೇ ನಿರೂಪಕರಾದರು. ಆಮೇಲೆ ಆಡಿಷನ್‌ಗಳಲ್ಲಿ ಭಾಗವಹಿಸಿ, ‘ಅನುರಾಧ ಸಂಗಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಅವರ ಮೊದಲ ಪ್ರಾಜೆಕ್ಟ್. ಆಮೇಲೆ ‘ಕುಲವಧು’, ‘ಗಿರಿಜಾ ಕಲ್ಯಾಣʼ ಧಾರಾವಾಹಿಗಳಲ್ಲಿ ನಟಿಸಿದ್ದರು.
ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಶ್ವಿನಿ ಅವರು ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.12 ವರ್ಷಗಳ ಕಾಲ ಸ್ವತಂತ್ರರಾಗಿ ಬದುಕಿದೆ. ಯಾಕೆ ಕೆಲಸ ಮಾಡಬೇಕು? ಯಾಕೆ ಒಬ್ಬರೇ ಇರಬೇಕು ಎನ್ನೋ ಪ್ರಶ್ನೆ ಬಂದಿತ್ತು, ಆದರೆ ಸುಮ್ಮನೆ ಇರೋಕೆ ಇಷ್ಟ ಆಗಲಿಲ್ಲ. ಇಷ್ಟು ವರ್ಷಗಳಲ್ಲಿ ಮನೆಯಿಂದ ಆಗಾಗ ಫೋನ್ ಬಂದಿತ್ತು. ನನಗೆ ಹೋಗಬೇಕು ಅಂತ ಅನಿಸಲೇ ಇಲ್ಲ” ಎಂದು ಅಶ್ವಿನಿ ಅವರು ಹೇಳಿದ್ದಾರೆ