Newsics_Kannada
Subscribe and watch video ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬಿಗ್ಬಾಸ್ ಸೀಸನ್ 12 ಶುರುವಾಗಿದೆ. ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಸೀಸನ್ 12 ಶುರುವಾಗುತ್ತಿದ್ದು ದೊಡ್ಮನೆಗೆ ಎಂಟ್ರಿ ಕೊಡುವ ಕೆಲವು ಸ್ಪರ್ಧಿಗಳ ಪರಿಚಯವೂ ಆಗಿದೆ. ಈಗಾಗಲೇ ಕಲರ್ಸ್ ಕನ್ನಡ ಪ್ರೋಮೋಗಳನ್ನು ಕೂಡಾ ಶೇರ್ ಮಾಡಿದೆ.
ಮೊದಲ ಸ್ಪರ್ಧಿಯಾಗಿ ನಟ ಕಾಕ್ರೂಚ್ ಸುಧಿ ಬಂದಿದ್ದಾರೆ. ಎರಡನೇ ಸ್ಪರ್ಧಿಯಾಗಿ ನಟಿ ಕಾವ್ಯಾ ಮನೆ ಪ್ರವೇಶ ಮಾಡಿದ್ದಾರೆ. ಮೂರನೇ ಸ್ಪರ್ಧಿಯಾಗಿ ಖ್ಯಾತ ಡಾಗ್ ಬ್ರೀಡರ್ ಆಗಿರುವ ಡಾಗ್ ಸತೀಶ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಹಾಗೂ ಮಲ್ಲಮ್ಮ ಬಿಗ್ ಬಾಸ್ ಕಂಟೆಸ್ಟೆಂಟ್ಗಳು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇನ್ನುಳಿದ ಸ್ಪರ್ಧಿಗಳು ಯಾರು ಯಾರು ಎನ್ನುವುದು ಕ್ಯೂರಿಸಿಟಿ ಬೆನ್ನಲ್ಲೇ ಕಿಚ್ಚ ಸುದೀಪ್ 4ನೇ ಸ್ಪರ್ಧಿಯನ್ನು ವೇದಿಕೆಗೆ ಆಹ್ವಾನಿಸಿ ವೆಲ್ಕಮ್ ಮಾಡಿದ್ದಾರೆ
ಬಿಗ್ಬಾಸ್ ಹೌಸ್ ಒಳಗೆ ಹೋಗುವ ಕಂಟೆಸ್ಟೆಂಟ್ಗಳನ್ನು ಕಿಚ್ಚ ಸುದೀಪ್ ಅವರು ಇಂದು ಪರಿಚಯ ಮಾಡಿಕೊಡಲಿದ್ದಾರೆ. ಸದ್ಯ ಇದೀಗ ಕಿಚ್ಚ ಸುದೀಪ್ ಅವರು ಮತ್ತೊಬ್ಬ ಸ್ಪರ್ಧಿಗೆ ಸ್ವಾಗತ ಕೋರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಅಲೆ ಎಬ್ಬಿಸಿದ್ದ ಕರಾವಳಿ ಪ್ರತಿಭೆ ಯುವತಿ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಇದೀಗ ಎಂಟ್ರಿಯಾಗಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮಾತನಾಡಿಸಿದ್ದಾರೆ.
ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮಾತನಾಡಿಸಿದ್ದು, ಕರಾವಳಿ ರಕ್ಷಿತಾ ಶೆಟ್ಟಿ ಅಡುಗೆ ತುಂಬಾ ಚೆನ್ನಾಗಿ ಮಾಡ್ತಾರೆ ಎಂದಿದ್ದಾರೆ. ಮೀನು ಸಾರಿಗೆ ಸಕ್ಕರೆ ಹಾಕ್ತಾರೆ ಎಂದು ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ತಲೆ ಅಲ್ಲಾಡಿಸಿದ್ದಾಳೆ. ತಾರೈ, ಕೆಂಪು ಹಂಚು, ಹನಿಸಿನಾ ಮೀನು ಸಾರಿಗೆ ಹಾಕ್ತಾರೆ ಎಂದು ರಕ್ಷಿತಾ ಹೇಳಿದ್ದಾರೆ.