Subscribe NewsicsKannada/ YouTube
newsics.com
ಹೊಂಬಾಳೆ ಫಿಲಮ್ಸ್ ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ಕ್ಕೆ ಬಿಡುಗಡೆ ಆಗಲಿದೆ.
ರಿಷಬ್ ಶೆಟ್ಟಿ ದೇಶದ ಪ್ರಮುಖ ನಗರಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ದೊಡ್ಡ ಪ್ರೀ ರಿಲೀಸ್ ಇವೆಂಟ್ ಮಾಡಲು ಹೊಂಬಾಳೆ ಸಜ್ಜಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಲು ಅದ್ಧೂರಿಯಾಗಿ ನಡೆಸಲು ಹೊಂಬಾಳೆ ಸಜ್ಜಾಗಿದೆ ಎನ್ನಲಾಗಿದೆ. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಿಷಬ್ ಶೆಟ್ಟಿ ಕಳೆದ ಎರಡು ವರ್ಷಗಳಿಂದಲೂ ಉತ್ತರ ಭಾರತದ ಮೀಡಿಯಾ ಕಾಲಂಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಮುಂಬೈನಲ್ಲಿ ಭಾರಿ ದೊಡ್ಡ ಇವೆಂಟ್ ಮಾಡುವ ಮೂಲಕ ‘ಕಾಂತಾರ: ಚಾಪ್ಟರ್ 1′ ಸಿನಿಮಾದ ಪ್ರಚಾರ ಮಾಡುವುದು ಚಿತ್ರತಂಡದ ಉದ್ದೇಶ. ಈ ಪ್ರೀ ರಿಲೀಸ್ಗೆ ಬಾಲಿವುಡ್ನ ಸ್ಟಾರ್ ನಟರನ್ನು ಸೇರಿದಂತೆ ನಟ ಯಶ್ ಅವರನ್ನೂ ಅತಿಥಿಯಾಗಿ ಆಹ್ವಾನಿಸುವ ಸಾಧ್ಯತೆ ಇದೆ.
ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ದೇಶದಲ್ಲಿ ಮಾತ್ರವಲ್ಲದೆ ದುಬೈ, ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಲ್ಲಿಯೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರೀಕ್ವೆಲ್ ಇದಾಗಿರಲಿದೆ.
https://www.instagram.com/reel/DPDl63FE6gt/?igsh=Yjh4Mm5mcTZoaWpy
Viral video ಸಾಲ ತೀರಿಸದೆ ಮೃತಪಟ್ಟ ಸ್ನೇಹಿತನ ಚಿತೆಯ ಮೇಲೇ ದಾಳಿ ಮಾಡಿದ ವ್ಯಕ್ತಿ! ವಿಡಿಯೋ ನೋಡಿ