Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಪೆಟ್ರೋಲ್ ಬಂಕ್ ಗೆ ಬಂದ ಖದೀಮರು ಸಿಬ್ಬಂದಿಗಳನ್ನೇ ಒತ್ತೆಯಾಳಾಗಿರಿಸಿ 1.75 ಲಕ್ಷ ದೋಚಿದ ಘಟನೆ ರಾಜಸ್ಥಾನದ ಬರಾನ್ನಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಸುಮಾರು ಐದರಿಂದ ಆರು ಮುಸುಕುಧಾರಿಗಳು ಬೆಳಗಿನ ಜಾವ 2:15 ರ ಸುಮಾರಿಗೆ ಅಂಬಿಕಾ ಪೆಟ್ರೋಲ್ ಬಂಕ್ ಅನ್ನು ಲೂಟಿ ಮಾಡಿದ್ದಾರೆ. ದರೋಡೆಕೋರರು ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡರು.
ಸುಮಾರು 1.75 ಲಕ್ಷ.ಗಳನ್ನು ಲೂಟಿ ಮಾಡಿದ ಪರಾರಿಯಾಗಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಮುಸುಕುಧಾರಿಗಳು ಪೆಟ್ರೋಲ್ ಬಂಕ್ ಉದ್ಯೋಗಿಯ ಕೈಕಾಲುಗಳನ್ನು ಕಟ್ಟಿ ಹಾಕಿರುವುದನ್ನು ಕಾಣಬಹುದು. ವೈರಲ್ ವೀಡಿಯೊಗೆ ಬರಾನ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಘಟನೆಯ ತನಿಖೆ ನಡೆಸುತ್ತಿದ್ದಾರೆ.