newsics.com
ಜಿಎಸ್ಟಿ ಕಡಿತ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.
ಜಿಎಸ್ಟಿ ಕಡಿತದ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ಕಾರ್ ಕಂಪನಿಗಳು ನಿರ್ಧರಿಸಿವೆ.
ಮಾರುತಿ ಸುಜುಕಿಯಿಂದ ಹಿಡಿದು ಲ್ಯಾಂಡ್ ರೋವರ್‌ವರೆಗೆ ವಿವಿಧ ಕಂಪನಿಗಳ ಕಾರುಗಳ ಬೆಲೆ 30 ಲಕ್ಷ ರೂ.ವರೆಗೆ ಕಡಿಮೆ ಆಗಲಿದೆ.
ವಾಹನ ಹಾಗೂ ಬಿಡಿಭಾಗಗಳ ಮೇಲೆ ಸೆಪ್ಟೆಂಬರ್ 22ರಿಂದ ಜಿಎಸ್ಟಿ ಶೇ. 28 ಇದ್ದದ್ದು ಶೇ.18ಕ್ಕೆ ಇಳಿಯಲಿದೆ. ಸರ್ಕಾರದ ಆಶಯದಿಂದ ಜಿಎಸ್ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಎಲ್ಲಾ ಆಟೊಮೊಬೈಲ್ ಕಂಪನಿಗಳು ನಿರ್ಧರಿಸಿವೆ.
ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂ.ವರೆಗೆ ಇಳಿಕೆ ಆಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂ.ವರೆಗೆ ಇಳಿಕೆಯಾಗಲಿದೆ. ಮರ್ಸಿಡೆಸ್ ಬೆಂಜ್, ಲ್ಯಾಂಡ್ ರೋವರ್ ಬ್ರ್ಯಾಂಡ್ನ ಕೆಲ ಕಾರುಗಳ ಬೆಲೆ 30 ಲಕ್ಷ ರೂ.ವರೆಗೂ ಇಳಿಕೆ ಆಗಲಿದೆ.
ಕಾರು ಖರೀದಿಸುವವರು ಸೆಪ್ಟೆಂಬರ್ 22ರವರೆಗೂ ಕಾದರೆ ತುಸು ಅಗ್ಗದ ಬೆಲೆಯಲ್ಲಿ ಪಡೆಯಬಹುದು.
ಮಾರುತಿ ಸುಜುಕಿಯ ಸುಮಾರು 4 ಲಕ್ಷ ರೂ. ಬೆಲೆಯ ಎಸ್ ಪ್ರೆಸ್ಸೋ ಕಾರಿನ ಬೆಲೆ ಬರೋಬ್ಬರಿ 1.29 ಲಕ್ಷ ರೂ ಇಳಿಕೆ ಆಗಲಿದೆ. ಆಲ್ಟೋ ಕೆ10 ಕಾರಿನ ಬೆಲೆಯಲ್ಲೂ ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದಷ್ಟು ಇಳಿಕೆ ಆಗಲಿದೆ. ಬಹಳ ಫಾಸ್ಟ್ ಮೂವಿಂಗ್ ಇರುವ ಸ್ವಿಫ್ಟ್ ಕಾರಿನ ಬೆಲೆ 84,600 ರೂ.ನಷ್ಟು ಕಡಿಮೆ ಆಗಲಿದೆ.
ಟಾಟಾ ಮೋಟಾರ್ಸ್ ನ ನೆಕ್ಸಾನ್, ಹ್ಯಾರಿಯರ್, ಸಫಾರಿಯಂತಹ 1,200 ಸಿಸಿಗಿಂತಲೂ ದೊಡ್ಡ ಕಾರುಗಳ ಬೆಲೆ ಒಂದು ಲಕ್ಷ ರೂ.ಗಿಂತ ಅಧಿಕದಷ್ಟು ಕಡಿಮೆ ಆಗಿದೆ.
ಆಲ್ಟ್ರೋಜ್, ಟಿಯಾಗೋ, ಟೈಗೋರ್, ಪಂಚ್ ಇತ್ಯಾದಿ ಸಣ್ಣ ಕಾರುಗಳ ಬೆಲೆ 85,000 ರೂ.ಗಳವರೆಗೂ ಕಡಿತಗೊಂಡಿದೆ.
ಮಹೀಂದ್ರ ಕಂಪನಿಯ ಥಾರ್, ಸ್ಕಾರ್ಪಿಯೋ, ಬೊಲೆರೊ, ಎಕ್ಸ್‌ಯುವಿ ಕಾರುಗಳ ಬೆಲೆಯೂ ಕಡಿಮೆ ಆಗುತ್ತಿದೆ.
ಕೊರಿಯಾದ ಹ್ಯೂಂಡಾಯ್ ಕಂಪನಿ ತನ್ನ ಕಾರುಗಳ ಬೆಲೆಯನ್ನು 2.4 ಲಕ್ಷ ರೂ.ವರೆಗೂ ಇಳಿಸಿದೆ. ಐ10, ಔರಾ, ಕ್ರೆಟಾ, ಆಲ್ಕಜಾರ್ ಕಾರುಗಳ ಬೆಲೆ 70,000 ರೂ.ಗಿಂತಲೂ ಅಧಿಕ ಮೊತ್ತದಷ್ಟು ಇಳಿಕೆ ಆಗಿದೆ.
ಕಿಯಾ, ರೇನೋ, ನಿಸ್ಸಾನ್, ಟೊಯೊಟಾ, ಹೊಂಡಾ, ಎಂಜಿ, ವೋಲ್ಸ್ವ್ಯಾಗನ್, ಸ್ಕೋಡಾ, ಜೀಪ್, ಸಿಟ್ರೋಯನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಜಾಗ್ವರ್ ಲ್ಯಾಂಡ್ ರೋವರ್ ಕಂಪನಿಯ ಕಾರುಗಳ ಬೆಲೆ ಸಾಕಷ್ಟು ಕಡಿಮೆ ಆಗಲಿದೆ.
ಟಾಟಾ ಒಡೆತನದ ಲ್ಯಾಂಡ್ ರೋವರ್ ಕಾರುಗಳ ಬೆಲೆ 30 ಲಕ್ಷ ರೂ.ವರೆಗೂ ಇಳಿಮುಖವಾಗಲಿದೆ. ಆಡಿ, ಬೆಂಜ್ ಕಾರುಗಳ ಬೆಲೆಯೂ 30 ಲಕ್ಷ ರೂ.ಗಳವರೆಗೆ ಕಡಿಮೆ ಆಗಲಿದೆ.
ಸೆಪ್ಟೆಂಬರ್ 22ರಂದು ಹೊಸ ಬೆಲೆಗಳು ಜಾರಿಗೆ ಬರಲಿವೆ. ಇದೇ ನಿರೀಕ್ಷೆಯಲ್ಲಿ ಆಗಸ್ಟ್‌ನಿಂದಲೇ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಆಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟ ತೀರಾ ಕಡಿಮೆಯಿದೆ. ಆದರೆ, ಅಕ್ಟೋಬರ್‌ನಲ್ಲಿ ದಾಖಲೆ ಸಂಖ್ಯೆಯಲ್ಲಿ ವಾಹನಗಳ ಮಾರಾಟವಾಗುವ ನಿರೀಕ್ಷೆಯಿದೆ.
ಊಟದ ನಂತರ ಈ ಪುಟ್ಟ ಬೀಜ ತಿಂದ್ರೆ ಸಾಕು ಬ್ಲಡ್ ಶುಗರ್ ನಾರ್ಮಲ್ ಆಗುತ್ತೆ!
ಬೆಂಗಳೂರಿನ ಕೋ ಲಿವಿಂಗ್ ಪಿಜಿಯಲ್ಲಿ ಘಟನೆ: ದೈಹಿಕ ಸಂಪರ್ಕ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ
Jubin Garg ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಭಾರತದ ಖ್ಯಾತ ಗಾಯಕ ಸಾವು