newsics.com
ಸರ್ವೀಸ್ ಲಿಫ್ಟ್ನಲ್ಲಿ ಮಹಿಳೆ ಕೂದಲು ಸಿಲುಕಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯ ಗಾಂಧಿ ನಗರದ ವಾಣಿಜ್ಯ ಮಾರುಕಟ್ಟೆಯಲ್ಲಿ ನಡೆದಿದೆ.
53 ವರ್ಷದ ಸುಮತಿ ಮೃತಪಟ್ಟ ಮಹಿಳೆ. ಗಾಂಧಿ ನಗರದ ಖಾಸಗಿ ಹಾರ್ಡ್ವೇರ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಮೂರನೇ ಮಹಡಿಗೆ ತೆರಳಲು ಲಿಫ್ಟ್ ಬಳಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ಮಹಿಳೆಯ ತಲೆಗೆ ತೀವ್ರ ಗಾಯಗಳಾದ ಪರಿಣಾಮ ಮೃತಪಟ್ಟಿದ್ದಾರೆ.
ಘಟನೆಯ ನಂತರ ಗಾಂಧಿ ನಗರ ಮಾರುಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ (BNS) 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.