newsics.com
ಧರ್ಮಸ್ಥಳದಲ್ಲಿ ಶವಹೂತ ಪ್ರಕರಣದ ಎಸ್ಐಟಿ ತನಿಖೆ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಬಂಗ್ಲೆಗುಡ್ಡದಲ್ಲಿ ಹೆ*ಣಗಳು ಸಿಕ್ಕಿದ್ವು ಅಂತ ಸೌಜನ್ಯ ಮಾವ ವಿಠಲ್ಗೌಡ ಸ್ಫೋಟಕ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ನಿನ್ನೆ ಸೌಜನ್ಯ ಮಾವ ವಿಠಲ್ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಎಸ್ಐಟಿ ಸ್ಥಳ ಮಹಜರು ನಡೆಸಿತ್ತು. ಈ ಬೆನ್ನಲ್ಲೇ ವಿಠಲ್ಗೌಡನ ವಿಡಿಯೋವೊಂದು ವೈರಲ್ ಆಗಿದ್ದು ಅದ್ರಲ್ಲಿ ವಿಠಲ್ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಹೆಣಗಳ ರಾಶಿ ಸಿಕ್ಕಿದೆ ಅಂತ ಹೇಳಿದ್ದಾನೆ.ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿವೆ. ಹತ್ತಿರ ಹತ್ತಿರ ಹತ್ತು ಫೀಟ್ಗಳಲ್ಲಿ ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು, ಸಣ್ಣ ಮಗುವಿನ ಎಲುಬು ಇದೆ ಎಂದು ಗೋಚರ ಆಗುತ್ತತ್ತು ಎಂದಿದ್ದಾರೆ.
ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಡೌಟೇ ಇಲ್ಲ ಅಂತ ವಿಠಲ್ಗೌಡ ಹೇಳಿದ್ದಾನೆ. ಅವರ ಮಾಹಿತಿ ಪ್ರಕಾರ ನಾನು ಮೃತದೇಹ ತೋರಿಸುವೆ, ಮಧ್ಯರಾತ್ರಿ 1 ಗಂಟೆಗೆ ಕರೆದರೂ ತನಿಖೆಗೆ ಬರುತ್ತೇನೆ ಅಂತ ಎಂದಿದ್ದಾನೆ. ವಿಠಲ್ಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.