newsics.com
ಚಿತ್ರದುರ್ಗ: ಕರ್ನಾಟಕದಲ್ಲಿ ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕುವ ಹಾಗಿಲ್ಲ ಎಂದು ಸರ್ಕಾರ ಡಿಜೆ ಬ್ಯಾನ್ ಮಾಡಿದೆ. ಇದೀಗ ಚಿತ್ರದುರ್ಗದಲ್ಲಿ ಗಣೇಶೋತ್ಸವದ ಶೋಭಾಯಾತ್ರೆಯ ಡಿಜೆ ನಿಷೇಧದ ವಿರುದ್ಧ ಬಿಜೆಪಿಯ ಶಾಸಕಾಂಗ ಸದಸ್ಯ ಕೆ.ಎಸ್. ನವೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಎಲ್‌ಸಿ ಕೆ.ಎಸ್. ನವೀನ್ ಸಿದ್ದರಾಮಯ್ಯ ಸರ್ಕಾರ ಡಿಜೆ ಬ್ಯಾನ್ ನೀತಿ ಬಗ್ಗೆ ಟೀಕೆ ಮಾಡಿದ್ದಾರೆ. ಕಾಂತಾರ ಸಿನಿಮಾ ಡೈಲಾಗ್ ಹೇಳಿ ಗುಡುಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ದೈವ ಹೇಳುವಂತೆ, ಕೋರ್ಟ್ ಮೆಟ್ಟಿಲ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ’ ಎಂದು. ಇದೇ ರೀತಿ ಗಣೇಶ ಇಂದು ಸಿದ್ದರಾಮಯ್ಯನವರಿಗೆ, ‘ವಿಧಾನಸೌಧದ ಮೆಟ್ಟಿಲ ಮೇಲೆ ನಿನ್ನ ತೀರ್ಮಾನ ನಾನೇ ಮಾಡ್ತೇನೆ’ ಎಂದು ಹೇಳುತ್ತಿದ್ದಾನೆ ಎಂದು ನವೀನ್ ಆಕ್ರೋಶದಿಂದ ಘೋಷಿಸಿದ್ದಾರೆ.
ಕಳೆದ 19 ವರ್ಷಗಳಿಂದ ಚಿತ್ರದುರ್ಗದಲ್ಲಿ ಶೋಭಾಯಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಈ ನಿಷೇಧಕ್ಕೆ ಯಾವುದೇ ಹೈಕೋರ್ಟ್ ಆದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.