newsics.com
ಬಾಗ್ಪತ್ : 19 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನೀರಿಗೆ ಹಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ನಿವಾಡಾ ಗ್ರಾಮದಲ್ಲಿ ನಡೆದಿದೆ.
ಭಾರೀ ಮಳೆ ಹಿನ್ನೆಲೆ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಪಾಯವನ್ನು ಲೆಕ್ಕಿಸದೇ ಯುವಕ ಜುನೈದ್ ಎಂಬಾತ ನೀರಿಗೆ ಜಿಗಿದಿದ್ದಾನೆ. ಆತನ ಸ್ನೇಹಿತ ಈ ದೃಶ್ಯವನ್ನ ಸೆರೆ ಹಿಡಿದಿದ್ದಾನೆ.ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಿರಂತರ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಜುನೈದ್ ಎಂದು ಗುರುತಿಸಲಾದ ಯುವಕ ಪತ್ತೆಯಾಗಿಲ್ಲ.
ಬಾಗ್ಪತ್ ಪೊಲೀಸರು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈವರೆಗೆ, ಯುವಕನ ಯಾವುದೇ ಸುಳಿವು ಪತ್ತೆಯಾಗಿಲ್ಲ.