newsics.comಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೂಪಾ ರಾಯಪ್ಪ ಒಂದು ಫೋಟೋಶೂಟ್ ಮೂಲಕ ಹವಾ ಕ್ರಿಯೆಟ್ ಮಾಡುತ್ತಲೇ ಇರುತ್ತಾರೆ.
ಶಾರ್ಟ್ ರೆಡ್ ಡ್ರೆಸ್‌ನಲ್ಲಿರುವ ಹಸಿ ಬಿಸಿ ಫೋಟೋ ಶೇರ್ ಮಾಡುವ ಮೂಲಕ ತನ್ನ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ಶಾರ್ಟ್ ರೆಡ್ ಡ್ರೆಸ್‌ನಲ್ಲಿ ರೂಪಾ ರಾಯಪ್ಪ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.
ದಿ ಜಡ್ಜ್‌ಮೆಂಟ್ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಜೆಕೆ ಜೊತೆ ಕಾಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 