newsics.com
ಬೆಂಗಳೂರು: ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದೆ. ಈ ಬಾರಿ ಸುದೀಪ್ ಅಭಿಮಾನಿಗಳ ಜತೆ ಬರ್ತ್ ಡೇ ಸೆಲೆಬ್ರೇಟ್ ಮಾಡಲಿದ್ದಾರೆ.
ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಬರ್ತ್‌ಡೆಗೂ ಮುನ್ನ ಸುದೀಪ್ ಅವರು ಪ್ರೆಸ್ ಮೀಟ್ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ(ಸೆ.1) ಮಧ್ಯಾಹ್ನ ಸುದೀಪ್ ಪ್ರೆಸ್ ಮೀಟ್ ಕರೆದಿದ್ದಾರೆ. ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಪ್ರೆಸ್ ಮೀಟ್ ನಡೆಯಲಿದ್ದು, ಹುಟ್ಟುಹಬ್ಬದ ಹಿನ್ನೆಲೆ ಅವರು ಏನೆಲ್ಲಾ ಮಾತನಾಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.
ಸುದೀಪ್ ಬರ್ತ್ ಡೇಗೆ ಸಹಜವಾಗಿ ಅವರ ಅಭಿಮಾನಿಗಳು ಮುಂದಿನ ಸಿನಿಮಾದ ಅಪ್ಡೇಟ್‌ಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಾಗಿ ಪ್ರೆಸ್ ಮೀಟ್‌ನಲ್ಲಿ ಅವರ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ʼಬಿಗ್ ಬಾಸ್ʼ ನಿರೂಪಕನಾಗಿ ಕಿಚ್ಚ ಮರಳಿದ್ದು, ಬಿಗ್ ಬಾಸ್ ಆರಂಭದ ಬಗ್ಗೆಯೂ ಮಾತನಾಡುವ ಸಾಧ್ಯತೆಯಿದೆ.
ಇದಲ್ಲದೆ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿಯೇ ಅವರು ಸರಳವಾಗಿ ಕೇಕ್ ಕಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.