newsics.com
ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರ ಮಾಡಿರುವ ಪ್ರಿಯಾ ಆಚಾರ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಮೂಲತಃ ದಾವಣಗೆರೆಯವರಾಗಿರುವ ಪ್ರಿಯಾ ಆಚಾರ್ ಬಿಸಿಎ ಪದವಿ ಮುಗಿಸಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿ ಶುರುವಾದಾಗ ಪ್ರಿಯಾ ಆಚಾರ್ ಅವರು ಓದು ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು.
ಪ್ರಿಯಾ ಆಚಾರ್ ಕೇವಲ ಕಿರುತೆರೆ ನಟಿಯಷ್ಟೇ ಅಲ್ಲ. ಅವರು ಚಿತ್ರದಲ್ಲಿಯೂ ನಟಿಸಿದ್ದಾರೆ. ಆ ಚಿತ್ರದ ಹೆಸರು ‘ಧಮಾಕಾ’. ಇದರ ‘ತುಕಾಲಿ’ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಚಿತ್ರದಲ್ಲಿ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡದ ಕಿರುತೆರೆಯ ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟಿ ಪ್ರಿಯಾ ಜೆ ಆಚಾರ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವಾಗಲೂ ಸೀರೆ, ಲಂಗ ದಾವಣಿ ತೊಟ್ಟುಕೊಂಡು ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಈಗ ಬೇರೆಯೇ ಲುಕ್ನಲ್ಲಿ ಕಣ್ಮನ ಸೆಳೆದಿದ್ದಾರೆ.
ಇನ್ನೂ, ಸೀರಿಯಲ್ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಪ್ರಿಯಾ ಅವರು ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ನಟಿ ಈಗ ಕರ್ಲಿ ಕೇರ್ನಲ್ಲಿ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಿದ್ದಾರೆ.
ಕಣ್ಣಿಗೆ ಕುಲಿಂಗ್ ಗ್ಲಾಸ್, ತಲೆಗೆ ಹೇರ್ ಬ್ಯಾಂಡ್ ಹಾಕಿಕೊಂಡು ಫೋಟೋಗೆ ಮಾದಕ ಲುಕ್ನಲ್ಲಿ ಕಂಗೊಳಿಸಿದ್ದಾರೆ. ನಟಿಯ ಹೊಸ ಅವತಾರಕ್ಕೆ ಫ್ಯಾನ್ಸ್ ಕನ್ಫ್ಯೂಸ್ ಆಗಿದ್ದಾರೆ. ಈ ಫೋಟೋ ವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/reel/DNaukERyq4y/?igsh=ZnA4b2tyenRrNm0y