Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shocking mur*der ಯೂಟ್ಯೂಬ್ ನೋಡಿ ಕೊಲೆಗೆ ಸಂಚು, ಕಿವಿಯಲ್ಲಿ ವಿಷ ಹಾಕಿ ಗಂಡನನ್ನು ಕೊಂದ ಹೆಂಡತಿ!
ದೇಶಪ್ರಮುಖ

Shocking mur*der ಯೂಟ್ಯೂಬ್ ನೋಡಿ ಕೊಲೆಗೆ ಸಂಚು, ಕಿವಿಯಲ್ಲಿ ವಿಷ ಹಾಕಿ ಗಂಡನನ್ನು ಕೊಂದ ಹೆಂಡತಿ!

Share
1 Min Read
SHARE

newsics.com
ತೆಲಂಗಾಣದ ಮಹಿಳೆಯೊಬ್ಬಳು ತನ್ನ ಗಂಡನನ್ನು ಅತ್ಯಂತ ಕ್ರೂರವಾಗಿ‌ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಆರೋಪಿ‌ ಮಹಿಳೆ ಯೂಟ್ಯೂಬ್ ನೋಡಿ ಈ ಕೊಲೆಗೆ ಸಂಚು ರೂಪಿಸಿದ್ದಾಳೆ ಎನ್ನುವ ವಿಚಾರ ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ.

ಯಾರಿಗೂ ಅನುಮಾನ ಬರಬಾರದು, ಗಂಡನ ದೇಹದಲ್ಲಿ ವಿಷದ ಅಂಶ ಸಿಗಬಾರದು ಎಂದು ಆಕೆ ಆತನ ಕಿವಿಗೆ ವಿಷ ಸುರಿದು ಕೊಲೆ ಮಾಡಿದ್ದಾಳೆ.

ಸಂಪತ್ ಮೃತಪಟ್ಟ ವ್ಯಕ್ತಿ. ಸಂಪತ್ ಗ್ರಂಥಾಲಯದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಪತ್ ಮದ್ಯಪಾನ ವ್ಯಸನಿಯಾಗಿದ್ದ. ಯಾವಾಗಲೂ ಕುಡಿದು ಮನೆಗೆ ಬರುತ್ತಿದ್ದ. ಆತ ಕುಡಿದ ಅಮಲಿನಲ್ಲಿ ತನ್ನ ಪತ್ನಿ ರಮಾದೇವಿಯೊಂದಿಗೆ ಜಗಳವಾಡುತ್ತಿದ್ದ. ಅವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.

ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಾದೇವಿ ಅದೇ ಹಣದಿಂದ ಮಕ್ಕಳನ್ನು

ಪೋಷಿಸುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ರಮಾದೇವಿಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಭೇಟಿಯಾಗಿತ್ತು. ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧವೂ ಬೆಳೆಯಿತು.

ಆರೋಪಿ ರಮಾದೇವಿ ಯೂಟ್ಯೂಬ್‌ನಲ್ಲಿ ಕಿವಿಗೆ ಕೀಟನಾಶಕ ಸುರಿದು ಕೊಲ್ಲುವ ವಿಧಾನವನ್ನು ವಿವರಿಸುವ ವೀಡಿಯೊವನ್ನು ನೋಡಿದ್ದಳು. ರಮಾದೇವಿ ತನ್ನ ಪ್ರಿಯಕರ ರಾಜಯ್ಯನಿಗೆ ಈ ಭಯಾನಕ ಪ್ಲಾನ್ ಬಗ್ಗೆ ಹೇಳಿದ್ದಳು. ಆತ ಆಕೆಗೆ ಕೀಟನಾಶಕ ತಂದುಕೊಟ್ಟಿದ್ದ.
ರಮಾದೇವಿಯ ಪ್ರಿಯಕರ ಮತ್ತು ಸ್ನೇಹಿತರು ಸೇರಿ ಸಂಪತ್‌ಗೆ ಕುಡಿಸಿದ್ದರು. ಸಂಪತ್ ಅತಿಯಾಗಿ ಕುಡಿದು ಪ್ರಜ್ಞೆಯನ್ನೇ ಕಳೆದುಕೊಂಡಾಗ ರಮಾದೇವಿಯ ಪ್ರಿಯಕರ ರಾಜಯ್ಯ ಅವನ ಕಿವಿಗೆ ಕೀಟನಾಶಕ ಹಾಕಿದನು. ಇದರಿಂದ ಸಂಪತ್ ಸ್ಥಳದಲ್ಲೇ ಕೊನೆಯುಸಿರೆಳೆದ.

ಮರುದಿನ, ರಮಾದೇವಿ ತನ್ನ ಗಂಡನ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಿಸಿದಳು. ಆಗಸ್ಟ್ 1ರಂದು ಸಂಪತ್ ಅವರ ಶವ ಪತ್ತೆಯಾಗಿದ್ದು, ರಮಾದೇವಿ ಮತ್ತು ರಾಜಯ್ಯ ಅವರ ಮರಣೋತ್ತರ ಪರೀಕ್ಷೆ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ಆದರೆ ರಮಾದೇವಿಯ ಮಗ ತನ್ನ ತಂದೆಯ ಸಾವನ್ನು ಅನುಮಾನಿಸಿ ತನಿಖೆಗೆ ಒತ್ತಾಯಿಸಿದ್ದ.

Health care ಬಿಗಿಯಾದ ಬ್ರಾ ಧರಿಸಿದರೆ ಸ್ತನ ಕ್ಯಾನ್ಸರ್ ಬರತ್ತಾ? ತಜ್ಞ ವೈದ್ಯರು ಹೇಳ್ತಿರೋದೇನು?

Minister Kharge ಯಾರ ಮನೆಯಲ್ಲಿ ಗಂಡು‌ ಮಗು ಹುಟ್ಟಿದರೂ ಬಿಜೆಪಿಯವರು ಕ್ರೆಡಿಟ್ ಪಡೆಯಲು‌ ಮುಂದಾಗ್ತಾರೆ! ಸಚಿವ ಪ್ರಿಯಾಂಕ್ ಖರ್ಗೆ

ಸ್ಫೋಟಕ ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ;  ಮತಗಳ್ಳತನ ಆರೋಪಕ್ಕೆ ಚುನಾವಣಾಧಿಕಾರಿ ತಿರುಗೇಟು

TAGGED:Wife kills husband by putting poison in his ear!
Share This Article
Facebook Twitter Copy Link Print
Previous Article ಕಡಬದ ಸಮ್ಯಕ್ತ್ ಜೈನ್‌ಗೆ ಚಂದನ ರತ್ನ ಪ್ರಶಸ್ತಿ ಪ್ರದಾನ
Next Article Today is Varamahalakshmi Vrat ಇಂದು ವರಮಹಾಲಕ್ಷ್ಮೀ ವ್ರತ: ನೀವು ಹೀಗೆಲ್ಲ ಮಾಡಿ.‌‌..

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?