Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಧರ್ಮಸ್ಥಳ ಕೇಸ್: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

Share
1 Min Read
SHARE

newsics.com

ಬೆಂಗಳೂರು: ಧರ್ಮಸ್ಥಳ ಪ್ರಕರಣದಿಂದ ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ.

ಹೌದು, ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಲಾಗಿದೆ’ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕ ಆದೇಶ ಕೋರಲಾದ ಅಸಲು ದಾವೆ ವಿಚಾರಣೆ ನಡೆಸುತ್ತಿರುವ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ತಮ್ಮ ಮುಂದಿರುವ ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಮನವಿ ಮಾಡಿದ್ದಾರೆ.

ನ್ಯಾಯಾಧೀಶ ರೈ ಅವರು ನೀಡಿದ್ದ ಪ್ರತಿಬಂಧಕ ಆದೇಶವನ್ನು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.
‘ನ್ಯಾಯಾಧೀಶ ರೈ ಅವರು, ಡಿ. ಹರ್ಷೇಂದ್ರ ಕುಮಾರ್‌ ಕುಟುಂಬದಿಂದ ನಿರ್ವಹಣೆ ಮಾಡಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ, ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು’ ಎಂದು ಕೋರಿ ಮೆಮೊ ಸಲ್ಲಿಸಿದ್ದರು.
ಈ ಕಾರಣದಿಂದ ನ್ಯಾಯಾಧೀಶ ರೈ ಅವರು, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಸಲು ನ್ಯಾಯ ಒದಗಿಸಿದರಷ್ಟೇ ಸಾಲದು. ಅದು ಕಾಣುವಂತಿರಬೇಕು. ಈ ಮೊಕದ್ದಮೆಯಲ್ಲಿ ನಾನು ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲ. ಆದಾಗ್ಯೂ, ನಾನು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಈ ಕಾರಣದಿಂದ, ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯ್ದೆ-1979ರ ಕಲಂ 13(2)(ಬಿ) ಪ್ರಕಾರ ಈ ಅಸಲು ದಾವೆ ಸಂಖ್ಯೆ No.5185/2025ರ ಈ ಮೊಕದ್ದಮೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ’ ಎಂದು ಪ್ರಧಾನ ನ್ಯಾಯಾಧೀಶರಿಗೆ ವಿನಂತಿ ಮಾಡಿದ್ದಾರೆ.
ನ್ಯಾಯಾಧೀಶ ವಿಜಯ‌ಕುಮಾರ್ ರೈ ಅವರು ತಮ್ಮ ಮುಂದಿದ್ದ ಈ ಪ್ರಕರಣದಲ್ಲಿ, ‘ಕ್ಷೇತ್ರದ ಧರ್ಮಾಧಿಕಾರಿ‌ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು’ ಎಂದು ಈ ಮೊದಲು ಏಕಪಕ್ಷೀಯ ಪ್ರತಿಬಂಧಕ ಆದೇಶ ನೀಡಿದ್ದರು.

ಆ. 10 ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಬೃಹತ್ ಸಮಾವೇಶ ನಿಗದಿ.!

TAGGED:Dharmasthala case: Judge recuses himself from hearing
Share This Article
Facebook Twitter Copy Link Print
Previous Article ಆ. 10 ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಬೃಹತ್ ಸಮಾವೇಶ ನಿಗದಿ.!
Next Article ಗಟ್ಟಿಗಿತ್ತಿ ಸವಿತಕ್ಕನ ಮಗ ನೇಣಿಗೆ ಕೊರಳೊಡ್ಡಿದ್ದೇಕೆ? ತಲೆಬುಡವಿಲ್ಲದ ಡೆತ್‌ನೋಟ್ ಮರ್ಮವೇನು?

Popular Posts

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

You Might Also Like

ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?