newsics.com
ನೊಯ್ಡಾ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರು ಮೃತಪಟ್ಟಿದರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಈ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ರಾಮ್‌ಗೋಪಾಲ್ ಶರ್ಮಾ ಅವರ ಮಗ 27 ವರ್ಷದ ಸಚಿನ್ ಮತ್ತು ಟುಕಿ ರಾಮ್ ಅವರ ಮಗ 50 ವರ್ಷದ ಲಕ್ಷ್ಮಿ ಶಂಕರ್ ಎಂದು ಗುರುತಿಸಲಾಗಿದೆ. ಇಬ್ಬರೂ ಗಾಜಿಯಾಬಾದ್ ನಿವಾಸಿಗಳು.
ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅವರು ವಾಹನದೊಳಗೆ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿರುವಂತೆ ತೋರುತ್ತದೆ. ಗಾಳಿಯ ಕೊರತೆ ಮತ್ತು ಕಾರಿನೊಳಗೆ ಕಿಟಕಿ ಹಾಕಿಕೊಂಡು ದೀರ್ಘಕಾಲ ಕುಳಿತಿದ್ದ ಕಾರಣದಿಂದಾಗಿ ಅವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿರಬಹುದು ಎಂದು ತನಿಖೆಯಲ್ಲಿ ತೊಡಗಿರುವ ಪೊಲೀಸರು ತಿಳಿಸಿದ್ದಾರೆ.