Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮದುವೆಯಾದ ಯುವತಿಗೆ ಮೆಸೇಜ್ ಮಾಡಿದಕ್ಕೆ ಹುಟ್ಟುಹಬ್ಬದಂದೇ ಕಾಂಗ್ರೆಸ್ ಯುವ ಕಾರ್ಯಕರ್ತನ ಹತ್ಯೆ
ಕರ್ನಾಟಕಪ್ರಮುಖ

ಮದುವೆಯಾದ ಯುವತಿಗೆ ಮೆಸೇಜ್ ಮಾಡಿದಕ್ಕೆ ಹುಟ್ಟುಹಬ್ಬದಂದೇ ಕಾಂಗ್ರೆಸ್ ಯುವ ಕಾರ್ಯಕರ್ತನ ಹತ್ಯೆ

Share
2 Min Read
SHARE

newsics.com

ಹಾವೇರಿ : ಹುಟ್ಟುಹಬ್ಬದ ದಿನವೇ ಕಾಂಗ್ರೆಸ್‌ ಯುವ ಕಾರ್ಯಕರ್ತನ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಮದುವೆಯಾದ ಯುವತಿಗೆ ಮೆಸೇಜ್ ಕಳಿಸಿದ್ದಕ್ಕೆ ಈತನಿಗೆ ಬರ್ತಡೆ ದಿನನೇ ಸಾವಿನ ಮಹೂರ್ತವೂ ಫಿಕ್ಸ್ ಆಗಿತ್ತು. ಮನೋಜ್ ಪ್ರಕಾಶ್ ಉಡಗಣಿ (28 ವರ್ಷ) ಕೊಲೆಯಾದ ಕಾಂಗ್ರೆಸ್ ಮುಖಂಡನಾಗಿದ್ದಾನೆ. ಮನೋಜ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ ವರದಾ ನದಿ ಬ್ರಿಡ್ಜ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮನೋಜ್‌ನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಹಾನಗಲ್ ತಾಲೂಕು ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಮನೋಜ್ ಉಡಗಣಿಯನ್ನು ಶಿವರಾಜ್ ಜಾಲವಾಡಗಿ ಸೇರಿದಂತೆ ಮೂವರು ಆರೋಪಿಗಳು ಸೇರಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಶಿವರಾಜ್ ಜಾಲವಾಡಗಿ ಅವರ ಪತ್ನಿಯನ್ನು ಮದುವೆಗೂ ಮೊದಲೇ ಮನೋಜ್ ಲವ್ ಮಾಡುತ್ತಿದ್ದನು. ಆದರೆ, ಆಕೆಗೆ ಮದುವೆಯಾದ ಬಳಿಕ ಸುಮ್ಮನಿರದೇ, ಮದುವೆ ಬಳಿಕವೂ ಮನೋಜ್ ಶಿವರಾಜ್‌ನ ಪತ್ನಿಗೆ ಮೆಸೆಜ್ ಮಾಡುವುದನ್ನು ಮುಂದುವರೆಸಿದ್ದನು. ಇದರಿಂದ ಶಿವರಾಜ್ ತೀವ್ರ ಆಕ್ರೋಶಗೊಂಡು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮನೋಜ್‌ನನ್ನು ಕಿಡ್ನಾಪ್ ಮಾಡಿ ಕಂಠ ಪೂರ್ತಿ ಬಲವಂತವಾಗಿ ಮದ್ಯ ಕುಡಿಸಿ ವರದಾ ನದಿ ಸೇತುವೆಯಿಂದ ನೂಕಿದ್ದಾರೆ. ಕಳೆದ ಜುಲೈ 26ರಂದು ಮನೋಜ್ ಬರ್ತಡೆ ಇತ್ತು. ಬರ್ತಡೆ ದಿನವೇ ಮನೋಜನ್‌ನ್ನು ಶಿವರಾಜ್ ಹಾಗೂ ಆತನ ಸಹಚರರು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದಾರೆ. ಸವಣೂರು ತಾಲೂಕು ಮೆಳ್ಳಾಗಟ್ಟಿ ಬಳಿ ವರದಾ ನದಿ ದಡದಲ್ಲಿ ಮನೋಜ್ ಶವ ಪತ್ತೆಯಾಗಿದೆ.

ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಸವಣೂರು ಪೊಲೀಸರು ಸವಣೂರು ತಾಲೂಕು ಮೆಳ್ಳಾಗಟ್ಟಿ ಗ್ರಾಮದ ವರದಾ ನದಿಯಿಂದ ಶವ ಹೊರ ತೆಗಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಈ ಬಗ್ಗೆ ಮಾತನಾಡಿದ ಮೃತ ಮನೋಜ್ ಅವರ ಅಣ್ಣ ಶಂಭು, ಶಿವರಾಜ್ ಜಾಲವಾಡಗಿ ಪತ್ನಿಗೂ ನನ್ನ ತಮ್ಮ ಮನೋಜ್‌ಗೂ ಲವ್ ಇತ್ತು. ಆದರೆ, ಹುಡುಗಿ ಮದುವೆಯಾದ ಬಳಿಕ ಮನೋಜ್ ಮೆಸೇಜ್ ಮಾಡಿದ್ದಾನೆ ಎಂದು ಆರೋಪ ಮಾಡಿದ್ದರು. ಇದೇ ವಿಚಾರವಾಗಿ ಈ ಹಿಂದೆಯೂ ಮನೋಜ್‌ಗೆ ಜೀವ ಬೆದರಿಕೆ ಹಾಕಿದ್ದರು. ಶಿವರಾಜ್ ಜಾಲವಾಡಗಿ ಬೆದರಿಕೆ ಹಾಕಿದ್ದನು. ಮನೋಜ್ ಕುತ್ತಿಗೆಗೆ ಚಾಕು ಇಟ್ಟು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನು. ನನ್ನ ತಮ್ಮ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆಗಿದ್ದನು. ಕಾಂಗ್ರೆಸ್ ಪಕ್ಷದಲ್ಲಿ ಬಹಳ ಸಕ್ರೀಯವಾಗಿ ಓಡಾಡಿಕೊಂಡಿದ್ದನು. ಆದರೆ, ಅವನನ್ನು ಕಿಡ್ನಾಪ್ ಮಾಡಿ ಶಿವರಾಜ್ ಜಾಲವಾಡಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು.

ಧರ್ಮಸ್ಥಳ ಕೇಸ್ : ಇಂದು 9ನೇ ಪಾಯಿಂಟ್ ನಲ್ಲಿ `SIT’ಯಿಂದ ಶೋಧ ಕಾರ್ಯ

TAGGED:Congress youth activist murdered on his birthday for texting a married woman
Share This Article
Facebook Twitter Copy Link Print
Previous Article ಧರ್ಮಸ್ಥಳ ಕೇಸ್ : ಇಂದು 9ನೇ ಪಾಯಿಂಟ್ ನಲ್ಲಿ `SIT’ಯಿಂದ ಶೋಧ ಕಾರ್ಯ
Next Article ಅತ್ಯಾಚಾರ ಕೇಸ್; ಪ್ರಜ್ವಲ್ ರೇವಣ್ಣಗೆ ಇಂದು ಶಿಕ್ಷೆ ಪ್ರಕಟ, ಕನಿಷ್ಠ 10 ರಿಂದ 14 ವರ್ಷ ಜೈಲು ಶಿಕ್ಷೆ ಸಾಧ್ಯತೆ!

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?