newsics.com
ನವದೆಹಲಿ: ಕೆಲವೊಂದು ಸಣ್ಣ ವಿಷಯಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಬಲ್ಲವು. ನಿದ್ದೆ ಎಂಬುದು ನಮ್ಮ ಜೀವನದ ಮೂರರಲ್ಲಿ ಒಂದು ಭಾಗವನ್ನು ಆವರಿಸಿಕೊಂಡಿರುವ ಮಹತ್ವದ ವಿಷಯ. ಇಂಥ ನಿದ್ದೆಯು ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಹಲವಾರು ವಿಷಯಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.
ಹೌದು, ನಿದ್ರಿಸುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಮತ್ತು ನಿದ್ರೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ಅಂಗಾತ ಬಿದ್ದು ಕೊಳ್ಳುವವರು, ಮಗ್ಗುಲಾಗಿ ಮಲಗುವವರು, ಮಗುಚಿ ನಿದ್ರಿಸುವವರು- ಹೀಗೆ ಬಗೆಬಗೆಯ ಭಂಗಿಗಳು ಸುಖ ನಿದ್ರೆಯನ್ನು ತರಿಸಬಹುದು ಅಥವಾ ನಿದ್ರೆಯ ಸುಖವನ್ನೇ ಹಾಳು ಮಾಡಬಹುದು.
ಅಂಗಾತ ಮಲಗುವುದು: ಈ ಭಂಗಿಯಲ್ಲಿ ಮಲಗುವುದರಿಂದ ತಲೆ, ಕುತ್ತಿಗೆ, ಬೆನ್ನುಗಳನ್ನು ನೇರವಾಗಿ ಒಂದು ರೇಖೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಮಾತ್ರವಲ್ಲ, ಕೀಲುಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡುವುದು ಈ ಭಂಗಿಯಿಂದ ಸಾಧ್ಯ. ಬೆನ್ನು ಹುರಿಯ ಆರೋಗ್ಯಕ್ಕೆ ಈ ಭಂಗಿ ಕ್ಷೇಮ. ಮುಖದ ಮೇಲೆ ಸುಕ್ಕು ಬರುವುದನ್ನೂ ಇದು ಕಡಿಮೆ ಮಾಡುವುದಂತೆ. ಹಾಗಾದರೆ ಸುಖನಿದ್ರೆಗೆ ಎಲ್ಲಕ್ಕಿಂತ ಒಳ್ಳೆಯ ಭಂಗಿ ಇದೇ ಹೌದೇ? ಹಾಗೆನ್ನುವಂತಿಲ್ಲ! ಸ್ಲೀಪ್ ಅಪ್ನಿಯ ಇರುವ ವರಿಗೆ ಅಥವಾ ಗೊರೆಯುವವರಿಗೆ ಇದು ಹೇಳಿಸಿದ ಭಂಗಿಯಲ್ಲ. ಗರ್ಭಿಣಿಯರಿಗೆ ಮೊದಲು ನಾಲ್ಕೈದು ತಿಂಗಳ ನಂತರ ಈ ಭಂಗಿ ಸೂಕ್ತವಲ್ಲ. ಇದರಿಂದ ಶಿಶುವಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.
ಇನ್ಮುಂದೆ ಈ ದೇಶದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಯೂಟ್ಯೂಬ್ ಬಳಕೆ ನಿರ್ಬಂಧ