newsics.com
ವಿಭಿನ್ನ ಅಡುಗೆ ವಿಡಿಯೋಗಳಿಂದಲೇ ಹೆಸರುವಾಸಿಯಾಗಿದ್ದ ಫಿರೋಜ್ ಚುಟ್ಟಿಪರಾ YouTubeಗೆ ಗುಡ್ ಬೈ ಹೇಳಿದ್ದಾರೆ.
ಫಿರೋಜ್ ಅವರು ತಮ್ಮ ಯೂಟ್ಯೂಬ್‌ನಲ್ಲಿ ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಸಬ್ ಸ್ಕೈಬರ್ ಗಳನ್ನು ಹೊಂದಿದ್ದಾರೆ. ಅವರೀಗ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸುವ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
ಇನ್ನು ಮುಂದೆ ಕೇವಲ ಯೂಟ್ಯೂಬ್ ಆದಾಯವನ್ನೇ ಅವಲಂಬಿಸಲು ಸಾಧ್ಯವಿಲ್ಲ ಮತ್ತು ಹೊಸ ಹೆಜ್ಜೆ ಇಡಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಮುಚ್ಚುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.
ನಾನು ಪ್ರಸ್ತುತ ಶಾರ್ಜಾದಲ್ಲಿದ್ದೇನೆ. ನಾವು ಒಂದು ಸಣ್ಣ ಹೆಜ್ಜೆ ಇಡುವ ಬಗ್ಗೆ ಯೋಚಿಸುತ್ತಿದ್ದೇವೆ. ಅದರ ಭಾಗವಾಗಿ ನಾವು ದುಬೈಗೆ ಬಂದಿದ್ದೇವೆ ಎಂದು ಯೂಟ್ಯೂಬ್ನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ನಾನು ಉದ್ಯಮಕ್ಕೆ ಇಳಿಯುವ ಬಗ್ಗೆ ಯೋಚಿಸುತ್ತಿದ್ದೇನೆ. ಯೂಟ್ಯೂಬ್ ನನ್ನ ಪ್ರಸ್ತುತ ಆದಾಯದ ಮೂಲವಾಗಿದೆ. ಆ ಆದಾಯವನ್ನು ಅವಲಂಬಿಸದೆ ನಾನು ಬೇರೆ ಯಾವುದಾದರೂ ವ್ಯವಹಾರವನ್ನು ಪ್ರಾರಂಭಿಸಿದರೆ ನೀವು ನನ್ನನ್ನು ಬೆಂಬಲಿಸುತ್ತೀರಾ? ನಾನು ರೆಸ್ಟೋರೆಂಟ್ ವ್ಯವಹಾರಕ್ಕೆ ಹೋದರೆ ಅದು ಎಷ್ಟು ಯಶಸ್ವಿಯಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆಹಾರ ವ್ಯವಹಾರವು ಸ್ವಲ್ಪ ಅಪಾಯಕಾರಿ. ನಾನು ಏನಾದರೂ ವ್ಯವಹಾರ ಮಾಡಬೇಕು. ಆ ರೀತಿಯಲ್ಲಿ, ನಾನು ಒಂದು ಬ್ರ್ಯಾಂಡ್ ಅನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇವರು ಹಾವು ಮತ್ತು ಉಷ್ಟ್ರಪಕ್ಷಿಯನ್ನು ಗ್ರಿಲ್ ಮಾಡುವುದು ಸೇರಿದಂತೆ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.