newsics.com
ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ಜನರಿಗೆ ಈ ಜಗತ್ತಲ್ಲಿ ಬೇರೆ ಏನೂ ಬೇಕಿಲ್ಲ. ಇಂದು ಯುವಜನರು ಎಲ್ಲಾದರೂ ತಗ್ಗಿಬಗ್ಗಿ ನಡೆಯುತ್ತಿದ್ದಾರೆ ಅಂದರೆ ಅವರ ಕೈಯಲ್ಲಿ ಮೊಬೈಲ್ ಇದೆ, ಅವ್ರು ಮೊಬೈಲ್ ನೋಡೋದ್ರಲ್ಲೇ ಬ್ಯುಸಿಯಾಗಿದ್ದಾರೆ ಅಂತಾನೆ ಅರ್ಥ. ಅಷ್ಟರ ಮಟ್ಟಿಗೆ ಮೊಬೈಲ್ ಮಾಯೆ ಎಲ್ಲರನ್ನೂ ಬಲೆಗೆ ಬೀಳಿಸಿಕೊಂಡಿದೆ. ಯುವಕರಷ್ಟೇ ಅಲ್ಲ ಮಹಿಳೆಯರು, ನಡುವಯಸ್ಕರು ಮೊಬೈಲ್ ಅಡಿಕ್ಟ್ ಆಗಿದ್ದಾರೆ. ಈ ಮೊಬೈಲ್ ನಿಂದ ಎಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತದೆ. ಮೊಬೈಲ್ ಒಂದಿದ್ದರೆ ಮೈಮರೆತು ಬಿಡುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಇಲೊಬ್ಬ ವೃದ್ಧ ವ್ಯಕ್ತಿ ಮೊಬೈಲ್ ನೋಡುತ್ತಾ ಕುಳಿತಿದ್ದ ಈ ವ್ಯಕ್ತಿಗೆ ರೈಲು ಹೊರಟದ್ದೇ ತಿಳಿಯೇ ಇಲ್ಲ. ಮುಂದೇನಾಯ್ತು?
ರೈಲ್ವೆ ಸ್ಟೇಷನ್‌ಗೆ ಬಂದ ವೃದ್ಧರೊಬ್ಬರು ರೈಲು ಹೊರಡಲು ಇನ್ನು ಟೈಮ್ ಇದೆಯಲ್ಲ ಎಂದು ಮೊಬೈಲ್ ನೋಡುತ್ತಾ ಕುಳಿತುಕೊಂಡಿದ್ದಾರೆ. ಆದ್ರೆ ಈ ವೃದ್ಧನಿಗೆ ಟ್ರೈನ್ ಹೊರಟದ್ದೇ ತಿಳಿಯಲಿಲ್ಲ. ಸ್ವಲ್ಪ ಸಮಯದ ಬಳಿಕ ಟ್ರೈನ್ ಹೊರಟಿರುವುದು ತಿಳಿಯುತ್ತಿದ್ದಂತೆ ಒಂದು ತಬ್ಬಿಬ್ಬಾದ ಈ ವೃದ್ಧ ಚಲಿಸುವ ರೈಲು ಹತ್ತಲು ಮುಂದಾಗಿರುವ ಘಟನೆಯು ಬೇತುಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೇತುಲ್ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಸತ್ಯ ಪ್ರಕಾಶ್ ರಾಜೂರ್ಕರ್ ಅವರು ವೃದ್ಧರೊಬ್ಬರ ಜೀವ ರಕ್ಷಿಸಿದ ವಿಡಿಯೋ ಇದು. ಚಲಿಸುವ ರೈಲು ಹತ್ತಲು ಪ್ರಯತ್ನಿಸುವಾಗ ಜಾರಿಬಿದ್ದ 66 ವರ್ಷದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನಿಲ್ದಾಣಗಳಲ್ಲಿ ಮೊಬೈಲ್ ಫೋನ್ ಬಳಸಿ ಗೊಂದಲಗಳಾಗುವುದನ್ನು ತಪ್ಪಿಸಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.