newsics.com
ಜಾಜ್‌ಪುರ: ಹಾಕಿ ಆಟಗಾರ್ತಿಯಾಗಿ ತರಬೇತಿ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಗೆ ತರಬೇತಿ ನೀಡುತ್ತಿದ್ದ ತರಬೇತುದಾರ ಮತ್ತು ಆತನ ಇಬ್ಬರು ಸಹಚರರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳೆಕಿಗೆ ಬಂದಿದೆ.
ಈ ಘಟನೆ ಜುಲೈ 3 ರ ಸಂಜೆ ನಡೆದಿದೆ. ಜಾಜ್‌ಪುರ ಹಾಕಿ ತರಬೇತಿ ಕೇಂದ್ರದಲ್ಲಿ ತನ್ನ ನಿಯಮಿತ ತರಬೇತಿಯ ನಂತರ ಹುಡುಗಿ ಮನೆಗೆ ಹಿಂತಿರುಗುತ್ತಿದ್ದಾಗ, ಆಕೆಯ ತರಬೇತುದಾರ ಮತ್ತು ಅವರ ಸಹಚರರು ಅವಳನ್ನು ಕ್ರೀಡಾಂಗಣದ ಬಳಿ ಕಾಯುತ್ತಿದ್ದ ವಾಹನದಲ್ಲಿ ಕರೆದೊಯ್ದರು. ನಂತರ ಅವರು ಬಲವಂತವಾಗಿ ಜಾಜ್‌ಪುರ ಪಟ್ಟಣದ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಸರದಿಯಲ್ಲಿ ಅತ್ಯಾಚಾರ ಎಸಗಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ, ಈ ವಿಷಯವನ್ನು ತನ್ನ ಕುಟುಂಬಕ್ಕೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಬಗ್ಗೆ ಬಾಲಕಿಯ ತಾಯಿ ಜುಲೈ 20 ರಂದು ಜಾಜ್‌ಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಬಿಎನ್‌ಎಸ್ ಸೆಕ್ಷನ್‌ಗಳು ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.