newsics.com
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚೆನ್ನೈ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಿಗೆ ಮುಂಜಾನೆ ವಾಕ್ ಮಾಡುವಾಗ ಸ್ವಲ್ಪ ತಲೆಸುತ್ತು ಬಂದಿದೆ. ಅವರ ರೋಗಲಕ್ಷಣಗಳ ಮೌಲ್ಯಮಾಪನಕ್ಕಾಗಿ ತಮಿಳುನಾಡು ಸಿಎಂ ಅವರನ್ನು ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯವನ್ನು ನಿರ್ಣಯಿಸಲು ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿದೆ