newsics.com
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಈ ಟ್ರೆಂಡ್ನಲ್ಲಿ ಕನ್ನಡದ ಸ್ಟಾರ್ ಹೀರೋಗಳು ಕೂಡ ಸಿಲುಕಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಗೌರಿ’ ಸಿನಿಮಾದ ಇವೆಂಟ್ನಲ್ಲಿ ಭಾಗಿ ಆಗಿದ್ದ ಅವರು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ.

‘ಪ್ಯಾನ್ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್ ಸ್ಟಾರ್ಗಳಿಗೆ ಕನ್ನಡದ ಬೇರುಗಳು ಕಟ್ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್ ಕಟ್ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು ಒಂದು ಭ್ರಮೆ. ದಕ್ಷಿಣದ ಸುಂದರವಾದ ನಾಯಕಿಯರು ಉತ್ತರ ಭಾರತಕ್ಕೆ ಹೋಗಿ 20 ವರ್ಷ ಬದುಕಬಹುದು ಅಷ್ಟೇ. ರಜನಿಕಾಂತ್, ಕಮಲ್ ಹಾಸನ್, ಮಮ್ಮುಟಿ, ಮೋಹನ್ ಲಾಲ್ ಬಾಂಬೆಗೆ ಹೋದರೆ 2 ವರ್ಷ ಇರೋಕೆ ಆಗಲ್ಲ. ನಮ್ಮ ಹೀರೋಗಳಿಗೆ ಪ್ಯಾನ್ ಇಂಡಿಯಾ ಎಂಬುದು ಸದ್ಯದ ಶೋಕಿ. ಒಂದು ಹನಿಮೂನ್ ಥರ. ಎಲ್ಲಿ ಸುತ್ತಿದ್ದರು ಕನ್ನಡಕ್ಕೆ ವಾಪಸ್ ಬರಲೇಬೇಕು. ಪ್ಯಾನ್ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಆಗಬಹುದು. ನಟರ ದಾಡಿ, ಬಾಡಿ ಬೆಳೆಯುತ್ತೆ ಅಷ್ಟೇ. ಬೇರೆ ಏನೂ ಬೆಳೆಯಲ್ಲ ನಾದಬ್ರಹ್ಮ ಹಂಸಲೇಖ ಒಂದಿಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರ ಮಗ ಸಬರ್ಜಿತ್ ಲಂಕೇಶ್ ನಾಯಕ ನಟನಾಗಿ ನಟಿಸುತ್ತಿರುವ ಗೌರಿ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಕನ್ನಡ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ನಟರಿಗೆ ಪ್ಯಾನ್ ಇಂಡಿಯಾ ಈಗಿನ ಶೋಕಿ, ಇದು ಹನಿಮೂನ್ ರೀತಿ, ದಾಡಿ ಬಾಡಿ ಬೆಳೆಯಬಹುದು, ಸ್ವಲ್ಪ ವ್ಯಾಪಾರವಾಗಬಹುದು ಬೇರೇ ಏನೂ ಬೆಳೆಯೊಲ್ಲ ಎಂದು ಹಂಸಲೇಖ ಹೇಳಿದ್ದಾರೆ.
ಅಲ್ಲದೇ ಇಂತಹ ಪರಂಪರೆಯನ್ನು ಬಿಟ್ಟು ಪ್ಯಾನ್ ಇಂಡಿಯಾ ಎಂದು ಇರಬೇಡಿ. ಪ್ಯಾನ್ ಇಂಡಿಯಾ ಹೋಗಬೇಡಿ ಎನ್ನುವುದಿಲ್ಲ. ಸ್ವಲ್ಪ ವ್ಯಾಪಾರ ಜಾಸ್ತಿಯಾಗುತ್ತದೆ. ಬಾಡಿ ದಾಡಿ ಬೆಳೆಯುತ್ತದೆ ಮಾತ್ರ. ಬೇರೆ ಏನೂ ಆಗೋದಿಲ್ಲ” ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದಾಡಿ ಬೆಳೆಸಿರುವ ಯಶ್, ರಿಷಬ್ ಶೆಟ್ಟಿ ಮುಂತಾದ ಪ್ಯಾನ್ ಇಂಡಿಯಾ ನಟರಿಗೆ ಪರೋಕ್ಷವಾಗಿ ತಿವಿದಿದ್ದಾರೆ.