newsics.com
ವಿಜಯಪುರ : ಸಾಲ ತೀರಿಸಿಲ್ಲ ಎಂದು ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಬಂಧಿಸಿದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಟ್ಟ ಸಾಲ ವಾಪಸ್ ನೀಡಿಲ್ಲ ಎಂದು ಕುಮಾರ್ ಗೌಡ ಬಿರಾದಾರ್ ಎಂಬಾತ ಓರ್ವ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಹಿಂಸಿಸಿದ್ದಾನೆ.
ಕುಮಾರ್ ಗೌಡ ಬಳಿ ವ್ಯಕ್ತಿಯೋರ್ವ 20 ಸಾವಿರ ಸಾಲ ಪಡೆದಿದ್ದನು.
ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ಸರಫಳಿ ಕಟ್ಟಿ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಘಟನೆ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.