newsics.com
ಉದ್ಯೋಗ ಕಡಿತ ಮಾಡುತ್ತಿರುವ ಟೆಕ್ ಕಂಪನಿಗಳ ಸಾಲಿಗೆ ಇದೀಗಇಂಟೆಲ್ ಕಂಪನಿಯು ಸೇರಿದೆ. ಬರೋಬ್ಬರಿ 5 ಸಾವಿರ ಉದ್ಯೋಗಿಗಳನ್ನು ಉದ್ಯೋಗ ದಿಂದ ವಜಾಗೊಳಿಸಿದ್ದಾರೆ.
ಇಂಟೆಲ್ ಕಂಪನಿಯ ಹೊಸ ಸಿಇಓ ಲಿಪ್ ಬು ಟನ್ ಅವರು ಕಂಪನಿಯನ್ನು ಪುನರ್ ರಚನೆ ಮಾಡುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿದ್ದಾರೆ. ಇಂಟೆಲ್ ಕಂಪನಿಯನ್ನು ಚಿಕ್ಕ ಮತ್ತು ಪರಿಣಾಮಕಾರಿಯಾಗಿ ರೂಪಿಸಲು ಲಿಪ್ ಬು ಟನ್ ನಿರ್ಧರಿಸಿದ್ದಾರೆ.
ಚಿಪ್ಗಳನ್ನು ತಯಾರಿಸುವ ಇಂಟೆಲ್ ಕಂಪನಿಯು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳ ವಿರುದ್ಧ ಹಿಂದೆ ಬೀಳುತ್ತಿದೆ. ಹೀಗಾಗಿ ಕಂಪನಿಯ ಸಂಕೀರ್ಣತೆಯನ್ನು ಕಡಿಮೆ ಮಾಡಲು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಲೇ ಆಫ್ ಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.