newsics.com
ನವದೆಹಲಿ:ನನ್ನನ್ನು ಮದುವೆಯಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ವ್ಯಕ್ತಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಮಹಿಳೆ ತನ್ನ ಪ್ರಿಯಕರನಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು.
ಆದರೆ, ಈ ವಿಚಾರಣೆ ವೇಳೆ ಆ ಮಹಿಳೆಯನ್ನು ಕೂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠ, ನೀವು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆ. ನೀವು ಪ್ರಬುದ್ಧವಾಗಿ ಯೋಚನೆ ಮಾಡುವ ಸಾಮರ್ಥ್ಯವಿರುವ ಮಹಿಳೆ.
ನೀವು ಮದುವೆಯಾದರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀರಿ. ಮದುವೆಯಾಗಿ ಗಂಡನ ಜೊತೆಗಿರುವಾಗ ಬೇರೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ನೀವು ಕೂಡ ಅಪರಾಧ ಮಾಡಿದ್ದೀರಿ. ಇದಕ್ಕಾಗಿ ನೀವು ಕೂಡ ವಿಚಾರಣೆಗೆ ಗುರಿಯಾಗಬಹುದು ಎಂದು ಮಹಿಳೆಗೆ ಚಾಟಿ ಬೀಸಿದೆ.
2016ರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಪರಿಚಯವಾಗಿದ್ದ ಮಹಿಳೆ ಅಂಕಿತ್ ಜೊತೆ ಅಕ್ರಮ ಸಂಬಂಧದಲ್ಲಿದ್ದರು. ಅಂಕಿತ್ ಅವರ ಒತ್ತಡದ ಮೇರೆಗೆ ಆ ಮಹಿಳೆ ತಮ್ಮ ಪತಿಯಿಂದ ವಿಚ್ಛೇದನವನ್ನು ಕೋರಿದ್ದರು. ಮಾರ್ಚ್ 6ರಂದು ಕುಟುಂಬ ನ್ಯಾಯಾಲಯವು ಅವರಿಬ್ಬರಿಗೂ ವಿಚ್ಛೇದನವನ್ನು ಮಂಜೂರು ಮಾಡಿತು. ವಿಚ್ಛೇದನದ ನಂತರ ಆ ಮಹಿಳೆ ಅಂಕಿತ್ ಅವರನ್ನು ಮದುವೆಯಾಗಲು ಕೇಳಿಕೊಂಡಿದ್ದರು. ಆದರೆ, ಆತ ನಿರಾಕರಿಸಿದ್ದ ಎಂದು ಆರೋಪಿಸಲಾಗಿದೆ.
https://www.newsics.com/2025/07/17/cabinet-meeting-decides-to-file-criminal-case-against-rcb/