newsics.com
ಉತ್ತರ ಪ್ರದೇಶ :ಪ್ರೀತಿಸುತ್ತಿದ್ದ ಗೆಳತಿಯ ಬ್ಯಾಕ್‌ಮೇಲ್ ಕಾಟಕ್ಕೆ ಹೆದರಿ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಇಲ್ಲಿನ ಉದ್ಯಮಿಯೊಬ್ಬರು ಗೆಳತಿಯ ಬ್ಲಾಕ್‌ಮೇಲ್ ಕಾಟಕ್ಕೆ ಬೇಸತ್ತು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜುಲೈ 15 ರಂದು ಈ ಘಟನೆ ನಡೆದಿದ್ದು, ಉದ್ಯಮಿ ಮನೋಜ್ ಕುಮಾರ್ (34) ಸೈರ್‌ಪುರ ಪ್ರದೇಶದ ಹೋಟೆಲ್ ಒಂದರಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಬಳಿ ಪೊಲೀಸರಿಗೆ ಪಿಸ್ತೂಲ್, ಕಾರ್ಟ್ರಿಡ್ಜ್ ಶೆಲ್‌ಗಳು ಮತ್ತು ಡೆತ್ ನೋಟ್ ಸಿಕ್ಕಿದ್ದು, ಆ ಲೆಟರ್‌ನಲ್ಲಿ ಉದ್ಯಮಿ ತಾನು ಪ್ರೀತಿಸಿದಾಕೆಯಿಂದ ಮೋಸ ಹೋಗಿರುವುದಾಗಿ ಬರೆದುಕೊಂಡಿದ್ದಾರೆ.