newsics.com
ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್ ಡಾನ್ಸ್ ವೀಡಿಯೋ ಈಗ ವೈರಲ್ ಆಗಿದೆ.
ಈ ಬೋಟ್ ಸ್ಪರ್ಧೆ ಸ್ಥಳೀಯ ಸಂಪ್ರದಾಯವಾಗಿದ್ದು, ಇದರಲ್ಲಿ ಅಂತಿಮವಾಗಿ ಗಮನಸೆಳೆದಿದ್ದು ರಯ್ಯನ್ ಡಾನ್ಸ್, 11 ವರ್ಷದ ರಯ್ಯನ್‌ನನ್ನು ಅಲ್ಲಿನ ಜನ ಪ್ರೀತಿಯಿಂದ ದಿ ರೀಪರ್ ಎಂದು ಕರೆಯುತ್ತಾರೆ. 5ನೇ ಕ್ಲಾಸ್ ವಿದ್ಯಾರ್ಥಿಯಾಗಿರುವ ಇಂಡೋನೇಷ್ಯಾದ ಗ್ರಾಮವೊಂದರ ರಾಯನ್ ಈ ಬೋಟ್ ರೇಸ್ ನಂತರ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು, ವಿಶ್ವದೆಲ್ಲೆಡೆಯ ಅನೇಕ ಸೆಲೆಬ್ರಿಟಿಗಳು ಆತನ ಈ ಡಾನ್ಸ್ ಟ್ರೈ ಮಾಡ್ತಿದ್ದಾರೆ.
ಕ್ವಾಂಟನ್ ಸಿಂಗಿಂಗಿ ರೀಜೆನ್ಸಿಯಿಂದ ಬಂದ ರಯ್ಯನ್, ಈ ವರ್ಷ ಮೊದಲ ಬಾರಿಗೆ ಇಂಡೋನೇಷ್ಯಾದ ಸಾಂಪ್ರದಾಯಿಕ ಪಕು ಜಾಲೂರ್(ಬೋಟ್ ಸ್ಪರ್ಧೆ) ಉತ್ಸವದಲ್ಲಿ ಭಾಗವಹಿಸಿದರು. ಆದರೆ ಈ ಪ್ರದರ್ಶನದಲ್ಲಿ ಗಮನ ಸೆಳೆದದ್ದು ದೋಣಿ ಸ್ಪರ್ಧೆಯಲ್ಲ, ಬದಲಾಗಿ ವೇಗವಾಗಿ ಚಲಿಸುವ ದೋಣಿಯ ಮುಂಭಾಗದಲ್ಲಿ ಅವರ ಆಯತಪ್ಪದ ನೃತ್ಯ.
ವಯಸ್ಕರು ಭಾಗವಹಿಸುವ ಈ ದೋಣಿ ಸ್ಪರ್ಧೆಯಲ್ಲಿ, ಕಿರಿದಾದ ದೋಣಿಗಳನ್ನು ಓಡಿಸುವ ಪಕು ಜಾಲೂರ್ ಓಟದಲ್ಲಿ, ದೋಣಿಯ ಮುಂಭಾಗದಲ್ಲಿ ‘ತೊಗಾಕ್ ಲುವಾನ್’ ಎಂದು ಕರೆಯಲ್ಪಡುವ ನರ್ತಕಿಯೊಬ್ಬರನ್ನು ನಿಲ್ಲಿಸುತ್ತಾರೆ ತಂಡವನ್ನು ಪ್ರೇರೇಪಿಸುವುದು ಅವರ ಕೆಲಸ. ಅದೇ ರೀತಿ ರಯ್ಯನ್ ಅವರು ಒಂದು ದೋಣಿಯಲ್ಲಿ ನರ್ತಕರಾಗಿ ಭಾಗಿಯಾಗಿದ್ದರು.
ಈಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವ ಹುರುಪಿನಲ್ಲಿ ದೋಣಿಯಲ್ಲಿರುವವರು ವೇಗವಾಗಿ ದೋಣಿ ಓಡಿಸುತ್ತಾರೆ. ಈ ವೇಳೆ ದೋಣಿಯ ಮುಂಭಾಗದ ತುದಿಯಲ್ಲಿ ಬ್ಯಾಲೆನ್ಸ್ ಮಾಡುವುದೇ ಒಂದು ಸಾಹಸ ಆದರೆ ರಯ್ಯನ್ ಅವರು ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ವೇಗದ ನಡುವೆಯೂ ಸಮತೋಲನ ಸಾಧಿಸುತ್ತಾ ನೃತ್ಯ ಮಾಡುತ್ತಿದ್ದರು.
ಈಗ ರಯ್ಯನ್ ಇಂಡೋನೇಷ್ಯಾದ ಸ್ಟಾರ್ ಸೆನ್ಸೇಷನ್ ಆಗಿದ್ದು, ಅವರನ್ನು ರಿಯಾವು ರಾಜ್ಯಪಾಲರು ಸಾಂಸ್ಕೃತಿಕ ರಾಯಭಾರಿಯಾಗಿ ನೇಮಿಸಿದ್ದಾರೆ.
CM SIDDARAMAIAH ಮಲ್ಲೇಶ್ವರಂ 11ನೇ ಕ್ರಾಸ್ ಗೆ ಬಿ.ಸರೋಜಾ ದೇವಿ ಹೆಸರು: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?