Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Fauja Singh dies in road accident ದೇಶದ ಹಿರಿಯ ಮ್ಯಾರಥಾನ್ ರನ್ನರ್,‌ ಶತಾಯುಷಿ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ
ದೇಶಪ್ರಮುಖ

Fauja Singh dies in road accident ದೇಶದ ಹಿರಿಯ ಮ್ಯಾರಥಾನ್ ರನ್ನರ್,‌ ಶತಾಯುಷಿ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ

Share
2 Min Read
SHARE

newsics.com

ನವವದೆಹಲಿ: ಪ್ರಸಿದ್ಧ ಮ್ಯಾರಥಾನ್ ರನ್ನರ್‌, ಶತಾಯುಷಿ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು. ಅವರಿಗೆ 114 ವರ್ಷ ವಯಸ್ಸಾಗಿತ್ತು.

ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ ಅಧಂಪುರದ ಬಿಯಾಸ್‌ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ.

ಕುಟುಂಬದವರು ಹೇಳುವಂತೆ, ಅವರು ತಮ್ಮ ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್‌ಗೆ ಹೊರಟಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಮಾಲೀಕರು ಡಿಕ್ಕಿ ಹೊಡೆದ ನಂತರ ವಾಹನೊಂದಿಗೆ ಪರಾರಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಯಸ್ಸಿನ ಹೊರತಾಗಿಯೂ, ಅವರು ಉತ್ತಮ ಆರೋಗ್ಯ ಕಾಯ್ದುಕೊಂಡಿದ್ದರು. ಕೋಲು ಹಿಡಿದುಕೊಂಡು ನಡೆಯುತ್ತಿದ್ದರು. ಅವರು ನಗರದಲ್ಲಿ ನಡೆಯುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಎಲ್ಲ ಮ್ಯಾರಥಾನ್‌ಗಳಲ್ಲಿ ಭಾಗವಹಿಸದೇ ಇದ್ದರೂ, ಕ್ರೀಡಾಪಟುಗಳನ್ನು ಹುರಿದುಂಬಿಸುವುದು, ರೇಸ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎನ್ನುವ ದಾಖಲೆ ಹೊಂದಿರುವ ಫೌಜಾ ಸಿಂಗ್, ತಮ್ಮ ಪತ್ನಿ ಮತ್ತು ಮಗ ಅಪಘಾತದಲ್ಲಿ ನಿಧನರಾದಾಗ ತಮ್ಮ 89ನೇ ವಯಸ್ಸಿನಲ್ಲಿ ಓಡಲು ಪ್ರಾರಂಭಿಸಿದರು. ಒಂಟಿತನ ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಅವರು ಓಟವನ್ನು ಪ್ರಾರಂಭಿಸಿದರು. ಅವರು ಅಂತಿಮವಾಗಿ 2000 ರಲ್ಲಿ ಲಂಡನ್‌ನಲ್ಲಿ ಪ್ರಾರಂಭವಾದ 18 ಮ್ಯಾರಥಾನ್‌ಗಳಲ್ಲಿ ಓಡಿದರು. ಅವರ ಕೊನೆಯ ಮೂರು ಮ್ಯಾರಥಾನ್‌ಗಳಾದ 2011 ರಲ್ಲಿ ಟೊರೊಂಟೊ, 2012 ರಲ್ಲಿ ಲಂಡನ್ ಮತ್ತು 2013ರ ಹಾಂಕಾಂಗ್‌ ಮ್ಯಾರಥಾನ್‌ ಬಳಿಕ ಅವರು ನಿವೃತ್ತರಾದರು.

102ನೇ ವರ್ಷದವರೆಗೂ ಅವರು ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತಲೇ ಇದ್ದರೂ, ಅವರ ಜನ್ಮ ದಿನಾಂಕವನ್ನು ದೃಢೀಕರಿಸಲು ಯಾವುದೇ ದಾಖಲೆಗಳಿಲ್ಲದ ಕಾರಣ ಅವರನ್ನು ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. ತೆಳ್ಳಗಿನ, ಎತ್ತರದ, ಸರಳ, ಸಸ್ಯಾಹಾರಿ ವ್ಯಕ್ತಿಯಾಗಿದ್ದ ಅವರು, ಪೆಟಾ ಅಭಿಯಾನಗಳಲ್ಲಿಯೂ ಕಾಣಿಸಿಕೊಂಡರು. ಅವರು ‘ಇಂಪಾಸಿಬಲ್ ಈಸ್ ನಥಿಂಗ್’ ಅಭಿಯಾನದಲ್ಲಿ ಅಡಿಡಾಸ್ ಪೋಸ್ಟರ್ ಬಾಯ್ ಕೂಡ ಆಗಿದ್ದರು.

ಅವರ ನಿಧನಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, “ದಿ ಲೆಜೆಂಡರಿ ಮ್ಯಾರಥಾನ್ ಓಟಗಾರ ಮತ್ತು ಭರವಸೆಯ ಶಾಶ್ವತ ಸಂಕೇತವಾಗಿದ್ದ ಸರ್ದಾರ್ ಫೌಜಾ ಸಿಂಗ್ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. 114 ನೇ ವಯಸ್ಸಿನಲ್ಲಿಯೂ ಸಹ, ಅವರು ತಮ್ಮ ಶಕ್ತಿ ಮತ್ತು ಬದ್ಧತೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದರು ಎಂದಿದ್ದಾರೆ.

Salt ಡೇಂಜರ್ ಉಪ್ಪು! ಇಲ್ಲಿದೆ ಬೆಚ್ಚಿಬೀಳಿಸೋ ವರದಿ…

TAGGED:centenarian Fauja Singh dies in road accidentCountry's oldest marathon runner
Share This Article
Facebook Twitter Copy Link Print
Previous Article Weird Village  ಈ ಗ್ರಾಮಕ್ಕೆ ಪುರುಷರಿಗೆ ನೋ ಎಂಟ್ರಿ; ನಿಷೇಧದ ಹಿಂದಿನ ಕಾರಣವೇನು?
Next Article Today’s prediction ಇಂದಿನ ರಾಶಿ ಭವಿಷ್ಯ, 15-07-2025, ಮಂಗಳವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?