Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Russian woman, children shift to Bengaluru ರಷ್ಯಾ‌ ಮಹಿಳೆ,‌ ಮಕ್ಕಳು‌ ಬೆಂಗಳೂರಿಗೆ ಶಿಫ್ಟ್, ಗುಹೆಯ ಜೀವನ ಹೇಗಿತ್ತು? ಗುಹೆಯಲ್ಲಿ ಏನೇನಿತ್ತು?
ಕರ್ನಾಟಕದೇಶಪ್ರಮುಖವಿದೇಶ

Russian woman, children shift to Bengaluru ರಷ್ಯಾ‌ ಮಹಿಳೆ,‌ ಮಕ್ಕಳು‌ ಬೆಂಗಳೂರಿಗೆ ಶಿಫ್ಟ್, ಗುಹೆಯ ಜೀವನ ಹೇಗಿತ್ತು? ಗುಹೆಯಲ್ಲಿ ಏನೇನಿತ್ತು?

Share
1 Min Read
SHARE

newsics.com

ಗೋಕರ್ಣ: ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆಯನ್ನು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಪೊಲೀಸರು ರಕ್ಷಿಸಿ ಬೆಂಗಳೂರಿಗೆ ಸ್ಥಳಾಂತರಿಸಿದ್ದು, ಅಲ್ಲಿಂದ ಸ್ವದೇಶಕ್ಕೆ ಕಳಿಸಲು ವ್ಯವಸ್ಥೆ ಮಾಡಲಾಗಿದೆ.

ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಮಹಿಳಾ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು , ಎಫ್.ಆರ್.ಆರ್.ಓ. ಕಚೇರಿಗೆ ಒಪ್ಪಿಸಿ ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಗೋಕರ್ಣದ ದುರ್ಗಮ ಗುಹೆಯಲ್ಲಿದ್ದ ಈ ವಿದೇಶಿ ಮಹಿಳೆಯ ದಿನಚರಿ ಕುತೂಹಲದ ಜತೆಗೆ ಅಚ್ಚರಿಯನ್ನೂ ತಂದಿದೆ.

ಪೊಲೀಸರು ರಕ್ಷಿಸಿದ ಬಳಿಕ ತನ್ನ ದೇಶದ ಒಡನಾಡಿಗಳೊಂದಿಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ. ಈ ಸಂದೇಶವನ್ನು ತನ್ನನ್ನು ರಕ್ಷಿಸಿದ ಪೊಲೀಸರಿಗೂ ಕಳುಹಿಸಿದ್ದಾಳೆ.
ಏಳು ದಿನದ ವಾಸ:
ವಿದೇಶಿ ಮಹಿಳೆ ಈ ದುರ್ಗಮ ಗುಹೆಯಲ್ಲಿ ಏಳು ದಿನ ವಾಸವಿದ್ದಳು. ಗುಹೆಯಲ್ಲಿ ಪಾಂಡುರಂಗನ ಮೂರ್ತಿ ಮತ್ತಿತರ ದೇವರುಗಳೊಂದಿಗೆ ಆಕೆ ಇದ್ದಳು. ಈ ಗುಹೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿತ್ತು. ಇದನ್ನು ತಲುಪಲು ತೀರಾ ಕಡಿದಾದ ದಾರಿಯಲ್ಲಿ ಸಾಗಬೇಕಿದ್ದು, ತುಸು ಆಯತಪ್ಪಿದರೂ ಜಾರಿ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಹೀಗಿದ್ದರೂ ಈ ಮಹಿಳೆ ಗುಹೆಯಲ್ಲಿದ್ದಳು. ಗುಹೆಯೊಳಗೆ ನೀರು ಜಿನುಗುತ್ತಿತ್ತು. ಅದರಲ್ಲೇ ಈಕೆ ವಾಸವಾಗಿದ್ದಳು. ಇಲ್ಲಿದ್ದ ವೇಳೆ ಹಾವುಗಳೂ ಓಡಾಡುತ್ತಿದ್ದವು ಎನ್ನುವುದನ್ನು ಈಕೆಯೇ ಒಪ್ಪಿಕೊಂಡಿದ್ದಾಳೆ.

ತಾನು ಒತ್ತಡದ ಬದುಕನ್ನು ಬಿಟ್ಟು ಏಕಾಂತ ಅನುಭವಿಸಲು ಇಲ್ಲಿಗೆ ಬಂದಿದ್ದೆ ಎಂದು ಹೇಳಿರುವ ಈಕೆ ತನ್ನ ಇರುವಿಕೆಯ ಬಗ್ಗೆ ಅತಿರೇಕವಾಗಿ ಬಿಂಬಿಸಿರುವುದಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ನೀರು , ಹಾವಿನ ಜತೆ ಇರುವುದನ್ನು ದೃಢಪಡಿಸಿರುವ ಈಕೆ, ಹಾವು ಮನೆಯಲ್ಲಿದ್ದಾಗಲೂ ಬರುತ್ತದೆ. ಅದರಂತೆ ಮಳೆ ಬಂದಾಗ ನೀರು ಬರಲೇಬೇಕು, ಅದರಲ್ಲೇನೂ ವಿಶೇಷವಿಲ್ಲ ಎಂದಿದ್ದಾಳೆ.

ಗುಹೆಯಲ್ಲಿ ಹಲವು ದೇವರ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಲಾಗುತ್ತಿತ್ತು. ತನ್ನ ಪುಟ್ಟಮಕ್ಕಳಿಗೆ ಹಲವು ಆಟಿಕೆಗಳನ್ನು ಕೊಡಿಸಿದ್ದಳು. ಇವೆಲ್ಲವೂ ಗುಹೆಯಲ್ಲಿ ಪತ್ತೆಯಾಗಿವೆ.

ಪೇಟೆಗೆ ಬಂದು ಆಹಾರ ಪದಾರ್ಥಗಳನ್ನು ಖರೀದಿಸಿ ಹೋಗುತ್ತಿದ್ದಳು ಎಂಬುದಕ್ಕೆ ಹಲವು ತಿಂಡಿಯ ಪ್ಯಾಕೆಟ್‌ಗಳು ಬಿದ್ದಿರುವುದು ಸಾಕ್ಷಿಯಾಗಿದೆ. ಅಡುಗೆ ತಯಾರಿಕೆಗೆ ಕಟ್ಟಿಗೆ, ಒಲೆ ಹಾಗೂ ಪಾತ್ರೆಗಳು ಗುಹೆಯಲ್ಲಿ ಪತ್ತೆಯಾಗಿವೆ.

TAGGED:children shift to BengaluruRussian woman
Share This Article
Facebook Twitter Copy Link Print
Previous Article Fetus in Fetu 36 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ಈ ವ್ಯಕ್ತಿಗೆ ಅವಳಿ ಮಕ್ಕಳು!; ಇದೆಲ್ಲ ಹೇಗಾಯ್ತು?
Next Article Weird Village  ಈ ಗ್ರಾಮಕ್ಕೆ ಪುರುಷರಿಗೆ ನೋ ಎಂಟ್ರಿ; ನಿಷೇಧದ ಹಿಂದಿನ ಕಾರಣವೇನು?

Popular Posts

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?