newsics.com
ಢಾಕಾ: ಡೀಲರ್ ಲಾಲ್ ಚಂದ್ ನನ್ನು ಗುಂಪೊಂದು ಕೊಲೆ ಮಾಡಿ, ನಂತರ ಮೃತದೇಹದ ಮೇಲೆ ನೃತ್ಯ ಮಾಡಿದ ಕ್ರೂರ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ಮಿಟ್‌ಫೋರ್ಡ್ ಆಸ್ಪತ್ರೆಯ ಬಳಿ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಇದೀಗ ದೇಶದಲ್ಲಿ ವ್ಯಾಪಾಕ ಆಕ್ರೋಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲಾಗಿದೆ.
ಲಾಲ್ ಚಂದ್ ನನ್ನು ಸಾರ್ವಜನಿಕವಾಗಿ ಕಾಂಕ್ರೀಟ್ ಬ್ಲಾಕ್ ಗಳಿಂದ ಥಳಿಸಿ ಕೊಂದಿದ್ದು, ಆನಂತರ ಅವನ ಮೃತದೇಹದ ಮೇಲೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿದೆ.
ಲಾಲ್ ಚಂದ್ ಢಾಕಾದ ಬಾಂಗ್ಶಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿ ಬೋಸ್ ಲೇನ್‌ನಲ್ಲಿ ಸ್ಕ್ರ್ಯಾಪ್ ವ್ಯವಹಾರ ನಡೆಸುತ್ತಿದ್ದ. ಆದರೆ, ಸ್ಥಳೀಯ ಭೂಮಿಯ ನಿಯಂತ್ರಣ ಮತ್ತು ವ್ಯಾಪಾರದ ಹಿತಾಸಕ್ತಿಗಳ ಕುರಿತು ದಾಳಿಕೋರರೊಂದಿಗೆ ವಿವಾದವಿತ್ತು.
ಲಾಲ್ ಚಂದ್‌ರ ಸಹೋದರಿಯ ಪ್ರಕಾರ, ಆರೋಪಿಗಳು ಅವರ ಗೋದಾಮನ್ನು ಮುಚ್ಚಲು ಮತ್ತು ಪ್ರದೇಶದಿಂದ ಹೊರಹೋಗಲು ಪದೇ ಪದೇ ಬೆದರಿಕೆ ಹಾಕಿದ್ದರು. ಈ ವಿವಾದವೇ ಕೊಲೆಗೆ ಕಾರಣವಾಯಿತು ಎಂದು ಶಂಕಿಸಲಾಗಿದೆ.
ಸದ್ಯ ಈ ಘಟನೆ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಗಂಭೀರ ಕಳವಳವನ್ನು ಎತ್ತಿ ಹಿಡಿದಿದ್ದು, ಬಾಂಗ್ಲಾದೇಶ ಸರ್ಕಾರ ಈ ಕೊಲೆಯನ್ನು “ಅನಾಗರಿಕ ಮತ್ತು ನಾಗರಿಕ ಸಮಾಜಕ್ಕೆ ಸ್ವೀಕಾರಾರ್ಹವಲ್ಲ” ಎಂದು ಬಣ್ಣಿಸಿದೆ.
ಈಗಾಗಲೇ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಯಲ್ಲಿ ನೇರವಾಗಿ ಭಾಗಿಯಾದ ತಿಟ್ಟನ್ ಗಜರ್‌ನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸ್ ಪತ್ತೇದಾರಿ ವಿಭಾಗವು ರಾಷ್ಟ್ರವ್ಯಾಪಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
Actress’s Saroja devi No more ಅಭಿನಯ ಸರಸ್ವತಿ, ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ ಇನ್ನಿಲ್ಲ