newsics.com / ನ್ಯೂಸಿಕ್ಸ್
2026ರ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಫ್ರಾನ್ಸ್‌ನ ಸ್ಟಾರ್ ಫಾರ್ವರ್ಡ್ ಕೈಲಿಯನ್ ಎಂಬಾಪೆ ಎರಡು ಗೋಲುಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾಗಿದ್ದಾರೆ.
ಪಂದ್ಯದ 66ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದ ಎಂಬಾಪೆ, ಬಳಿಕ ಮತ್ತೊಮ್ಮೆ ಜಾಲಿ ಕದಡಿ ತಮ್ಮ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 14ಕ್ಕೆ ಏರಿಸಿದರು. 82ನೇ ನಿಮಿಷದಲ್ಲಿ ಬಾಕೋಲಾ ಗೋಲು ಗಳಿಸಿ ಫ್ರಾನ್ಸ್‌ನ ಮುನ್ನಡೆಯನ್ನು ಮತ್ತಷ್ಟು ಬಲಪಡಿಸಿದರು.
ಈ ಅದ್ಭುತ ಪ್ರದರ್ಶನದೊಂದಿಗೆ ಎಂಬಾಪೆ ಫ್ರಾನ್ಸ್ ಪರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ, ತಮ್ಮ 13 ಮತ್ತು 14ನೇ ವಿಶ್ವಕಪ್ ಗೋಲುಗಳ ಮೂಲಕ ಅರ್ಜೆಂಟೀನಾ ದಿಗ್ಗಜ ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಎಂಬಾಪೆಯ ಮಿಂಚಿನ ಆಟದ ನೆರವಿನಿಂದ ಫ್ರಾನ್ಸ್ ತಂಡವು ಟೂರ್ನಿಯಲ್ಲಿ ತನ್ನ ಪ್ರಬಲ ಪೈಪೋಟಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.