newsics.com
ವಿಜಯನಗರ : ಕೋತಿಗಳ ದಾಳಿಗೆ ಪುಟ್ಟ ಬಾಲಕಿಯೊರ್ವಳು ಮೃತಪಟ್ಟ ಘಟನೆ ಹೊಸಪೇಟೆಯ ಚಲುವಾದಿ ಕೇರಿಯಲ್ಲಿ ನಡೆದಿದೆ.
ಕೋತಿ ದಾಳಿಯಿಂದ ಮೃತಪಟ್ಟ ಬಾಲಕಿಯನ್ನು, ಮೂರುವರೆ ವರ್ಷದ ಅನನ್ಯಾ ಅಂತ ಗುರುತಿಸಲಾಗಿದೆ.
ಮುನಿಯಪ್ಪ ಎಂಬುವರ ಪುತ್ರಿ ಅನನ್ಯಾ ಜೂ.28ರಂದು ಮೊಸರು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ಕೋತಿ ದಾಳಿ ಮಾಡಿದೆ. ಅಂದು ರಾತ್ರಿಯೇ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಜು.2ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಬಾಲಕಿ ಕೋಮಾಗೆ ಹೋಗಿದ್ದಳು. ಚಿಕಿತ್ಸೆ ಮುಂದುವರಿಸಿದ್ದರೂ ಫಲಕಾರಿ ಆಗದೆ ಜು.7ರಂದು ಮೃತಪಟ್ಟಿದ್ದಾಳೆ. ಒಂದು ವಾರದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಸೂಕ್ತ ಪರಿಹಾರ ನೀಡುವಂತೆ ಕುಟುಂಬದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Nipha virus ನಿಫಾ ವೈರಸ್ ಗೆ 2ನೇ ಬಲಿ: ಈ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ