newsics.com
ಮುಂಬೈನಲ್ಲಿ ಮನೆಕೆಲಸದಾಕೆಯೊರ್ವಳು ತಮ್ಮ ಮನೆ ಒಡತಿ ರಿಚಾ ಜೊತೆಗೆ ಇಂಗ್ಲಿಷ್ನಲ್ಲಿ ಸಂವಹನ ನಡೆಸಿದ್ದಾಳೆ. ತಾನು ಕೆಲಸಕ್ಕೆ ಬರುವುದಿಲ್ಲ, ರಜೆ ತೆಗೆದುಕೊಳ್ಳುತ್ತೇನೆ ಎಂದು ಇಂಗ್ಲಿಷ್ನಲ್ಲಿ ಮೆಸೇಜ್ ಮಾಡಿ ಹೇಳಿಕೊಂಡಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
@rich-athinks ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ನಲ್ಲಿ ಮನೆ ಮಾಲಕಿ ತಮ್ಮ ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮನೆಕೆಲಸದಾಕೆ ಕ್ಯೂಟಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಮನೆ ಮಾಲಕಿ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ನಲ್ಲಿ ದೀದಿ ನಾನು ಮಾಧುರಿ, ನಿಮಗೆ ಮೊದಲೇ ತಿಳಿಸಲು ನಮಗೆ ಮರೆತು ಹೋಗಿದೆ. ನನಗೆ ಬರಲು ಸಾಧ್ಯವಾಗುತ್ತಿಲ್ಲ. ನಾನು ನಾಳೆ ರಜೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಬರೆದಿರುವುದನ್ನು ನೋಡಬಹುದು. ಮನೆ ಮಾಲಕಿ ರಿಚಾ ತನ್ನ ಮನೆಕೆಲಸದಾಕೆಯ ಇಂಗ್ಲಿಷ್ ಭಾಷೆಯಲ್ಲಿ ಮೆಸೇಜ್ ಕಳುಹಿಸಿರುವುದು ನೋಡಿ ಖುಷಿಪಟ್ಟಿದ್ದು, ಆಕೆಯ ಬಗ್ಗೆ ಹೆಮ್ಮೆಯಾಗಿದೆ.
ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಅವಳ ನಂಬರ್ ಕಳುಹಿಸಿ, ನಾನು ಅವಳಿಗೆ ಹೊಸ ಕೆಲಸ ಕೊಡಿಸುವೆ ಎಂದಿದ್ದಾರೆ.
ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ: ಪೋಸ್ಟ್ ಹಾಕಿ ಕನ್ನಡಿಗರನ್ನ ಕೆಣಕಿದ ನಾರ್ಥಿಗಳು!