Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Lifestyle ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಇದರಿಂದ ಹೊರ ಬರಲು ಈ ರೀತಿ ಮಾಡಿ
ಪ್ರಮುಖಲೈಫ್‌ಸ್ಟೈಲ್

Lifestyle ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಇದರಿಂದ ಹೊರ ಬರಲು ಈ ರೀತಿ ಮಾಡಿ

Share
2 Min Read
SHARE

newsics.com

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಸೋಷಿಯಲ್‌ ಮೀಡಿಯಾ ರೀಲ್ಸ್‌ಗಳು ಮನೋರಂಜನೆಯ ಒಂದು ಭಾಗವಾಗಿದೆ. ಹಿಂದೆಲ್ಲಾ ಟಿವಿ ನೋಡುತ್ತಾ ಟೈಮ್‌ ಪಾಸ್‌ ಮಾಡಿದ್ರೆ, ಈಗೆಲ್ಲಾ ಜನ ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಅದರಲ್ಲೂ ಕೆಲವರಂತೂ ಈ ರೀಲ್ಸ್‌ಗೆ ವ್ಯಸನಿಗಳಾಗಿಬಿಟ್ಟಿದ್ದಾರೆ.
ಯಾವಾಗ್ಲೂ ರೀಲ್ಸ್‌ ಸ್ಕ್ರೋಲ್‌ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಹೀಗಿರುವಾಗ ಈ ಅಭ್ಯಾಸವನ್ನು ನಿಯಂತ್ರಿಸುವುದು ಬಹಳ ಮುಖ್ಯ.

ಸಮಯದ ಮಿತಿ: ರೀಲ್ಸ್‌ ನೋಡಲು ಸಮಯದ ಮಿತಿಯನ್ನು ಹೊಂದಿಸಿ. ಕೆಲವರು 5 ನಿಮಿಷ ರೀಲ್ಸ್‌ ನೋಡಲು ಕೂತರೆ ಗಂಟೆಗಟ್ಟಲೇ ರೀಲ್ಸ್‌ ವೀಕ್ಷಿಸುತ್ತಾ ಸಮಸಯ ಕಳೆಯುತ್ತಾರೆ. ಆದ್ದರಿಂದ ಮೊದಲು ಸಮಯದ ಮಿತಿಯನ್ನು ನಿಗದಿಪಡಿಸಿ. ಉದಾಹರಣೆಗೆ ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ರೀಲ್ಸ್ ನೋಡುವುದು. ಹೀಗೆ ಸಮಯದ ಮಿತಿಯನ್ನು ನಿಗದಿ ಪಡಿಸಿ ಹಾಗೂ ಅದಕ್ಕಿಂತ ಹೆಚ್ಚು ರೀಲ್ಸ್‌ ನೋಡಬೇಡಿ.
ನೋಟಿಫಿಕೇಶನ್‌ ಆಫ್ ಮಾಡಿ: ನೀವು ಸೋಷಿಯಲ್‌ ಮೀಡಿಯಾದ ನೋಟಿಫಿಕೇಶನ್‌ಗಳನ್ನು ಆಫ್‌ ಮಾಡಿ ಇಡಬೇಕು. ನಿಮ್ಮ ಫ್ರೆಂಡ್ಸ್‌ ರೀಲ್ಸ್‌ ಶೇರ್‌ ಮಾಡಿದ್ರೆ, ಮತ್ತೆ ನೀವು ಪದೇ ಪದೇ ಸೋಷಿಯಲ್‌ ಮೀಡಿಯಾ ನೋಡುತ್ತಾ ಕೂರುತ್ತೀರಿ. ಅದಕ್ಕಾಗಿ ನೋಟಿಫಿಕೇಶನ್‌ ಆಫ್‌ ಮಾಡಿ.
ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹೆಚ್ಚಿನವರು ಫ್ರೀ ಟೈಮ್‌ನಲ್ಲಿ ರೀಲ್ಸ್‌ ನೋಡುತ್ತಾರೆ. ಆದರೆ ರೀಲ್ಸ್‌ ನೋಡುವ ಬದಲು ನೀವು ಫ್ರೀ ಟೈಮಲ್ಲಿ ಪುಸ್ತಕ ಓದುವುದೋ, ಸಾಂಗ್‌ ಕೇಳುವುದು, ಚಿತ್ರ ಬಿಡಿಸುವುದು, ಆಟ ಆಡುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಲು ಅಭ್ಯಾಸ ಮಾಡಿ. ಇದು ಕೂಡಾ ನೀವು ರೀಲ್ಸ್‌ ಚಟದಿಂದ ಹೊರ ಬರಲು ಸಹಾಯ ಮಾಡುತ್ತದೆ.
ಮೊಬೈಲ್‌ ಡೇಟಾ ಆಫ್‌ ಮಾಡಿ: ಯಾವಾಗಲೂ ಮೊಬೈಲ್‌ ಡೇಟಾ ಆನ್‌ ಮಾಡಿ ಇಟ್ಟುಕೊಳ್ಳಬೇಡು. ಅದರಲ್ಲೂ ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದ್ದರೆ, ಡೇಟಾವನ್ನು ಆಫ್ ಮಾಡಿ ಮತ್ತು ಫೋನನ್ನು ನಿಮ್ಮಿಂದ ದೂರವಿಡಿ. ಇದರಿಂದಲೂ ನೀವು ರೀಲ್ಸ್‌ ನೋಡುವುದನ್ನು ಕಡಿಮೆ ಮಾಡಬಹುದು.
ಡಿಜಿಟಲ್ ಡಿಟಾಕ್ಸ್ ಅಭ್ಯಾಸ ಮಾಡಿ: ವಾರದಲ್ಲಿ ಒಂದು ದಿನ ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರವಿರಿ. ಇದನ್ನು ಡಿಜಿಟಲ್ ಡಿಟಾಕ್ಸ್ ಎಂದು ಕರೆಯಲಾಗುತ್ತದೆ. ಈ ದಿನ, ನೀವು ನಿಮ್ಮ ಮೊಬೈಲ್‌ನಿಂದ ದೂರವಿರಿ ಮತ್ತು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊರಗೆ ಹೋಗಿ ಅವರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಿರಿ. ಹೀಗೆ ಮಾಡುವ ಮೂಲಕವೂ ನೀವು ಕ್ರಮೇಣ ರೀಲ್ಸ್‌ ಮತ್ತು ಮೊಬೈಲ್‌ ಚಟದಿಂದ ಹೊರ ಬರಬಹುದು.
ಫೋನನ್ನು ದೂರವಿಡಿ: ಸಾಧ್ಯವಾದಷ್ಟು ನೀವು ನಿಮ್ಮಿಂದ ನಿಮ್ಮ ಫೋನನ್ನು ದೂರವಿಡಲು ಪ್ರಯತ್ನಿಸಿ. ಮೊಬೈಲ್‌ ಹತ್ತರವಿದ್ದರೆ ನೀವು ಪದೇ ಪದೇ ಮೊಬೈಲ್‌ ಆನ್‌ ಮಾಡಿ ರೀಲ್ಸ್‌ ನೋಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಬೈಲ್‌ ಫೋನ್‌ ದೂರವಿಡಿ. ಅಗತ್ಯವಿದ್ದಾಗ ಮಾತ್ರ ಅದನ್ನು ಬಳಸಿ.

Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!

TAGGED:Are you wasting your time watching Reels? Here's how to get out of it
Share This Article
Facebook Twitter Copy Link Print
Previous Article Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!
Next Article ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಭಕ್ತರ ಭಾರೀ ನೂಕುನುಗ್ಗಲು: ಕಾಲ್ತುಳಿತದಲ್ಲಿ ಮಹಿಳೆ ಸಾವು

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?