newsics.com
ಓಡಿಶಾದಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಹುಡುಗಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಹುಡುಗಿ ನೇಹಾ (23). ಅಪ್ಪ ಅಮ್ಮನಿಗೆ ಒಬ್ಬಳೇ ಒಬ್ಬಳು ಮಗಳು ನೇಹಾ.. ಇರೋ ಒಬ್ಬ ಮಗಳ ಮೇಲೆ ಪ್ರಾಣವನ್ನೆ ಇಟ್ಕೊಂಡಿದ್ರು. ಆದ್ರೀಗ ಈ ನೇಹಾ ಬದುಕು ದಾರುಣವಾಗಿ ಅಂತ್ಯ ಕಂಡಿದೆ. ನಿಗೂಢ ಸಾವಿನ ಸುತ್ತ ಅನುಮಾನಗಳ ಹುತ್ತವೇ ಬೆಳೆದಿದೆ.
ಮಂಗಳವಾರ ಬೆಳಗ್ಗೆ ಕೂಡ ನೇಹಾ ತಾಯಿ ಜೊತೆ ಮಾತಾಡಿದ್ಳು. ನೇಹಾ ತಾಯಿ ಎಂಟು ಗಂಟೆಗೆ ಗುಡ್ ಮಾರ್ನಿಂಗ್ ಅಂತ ಮೆಸೇಜ್ ಮಾಡಿದ್ರು.. ಆಮೇಲೆ ನೇಹಾ ಕೂಡ ಗುಡ್ ಮಾರ್ನಿಂಗ್ ಅಮ್ಮ ಅಂತ ರಿಪ್ಲೈ ಮಾಡಿದ್ಳು. ಗುಡ್ ಮಾರ್ನಿಂಗ್ ಅಮ್ಮ ಅಂತ ರಿಪ್ಲೈ ಬಂದ್ಮೇಲೆ 9 ಗಂಟೆಗೆ ಸುಮಾರಿಗೆ ನೇಹಾ ತಾಯಿ ಮತ್ತೆ ಎರಡು ಟೆಕ್ಸ್ಟ್ ಕಳಿಸಿದ್ದಾರೆ. ಆದ್ರೆ ವಾಪಸ್ ಏನೂ ರಿಪ್ಲೈ ಬಂದಿಲ್ಲ. ಕೊನೆಗೆ ಫೋನ್ ಮಾಡಿ ನೋಡಿದ್ದಾರೆ. ಫೋನ್ ಸ್ವೀಚ್ ಆಫ್ ಬಂದಿದೆ. ಕೆಲಸಕ್ಕೆ ಹೋಗಿರ್ತಾಳೆ ಅಂತ ನೇಹಾ ತಂದೆ ತಾಯಿ ಹೆಚ್ಚೆನೂ ತಲೆ ಕೆಡಿಸ್ಕೊಂಡಿಲ್ಲ. ನೋಡಿದ್ರೆ ಸಂಜೆಗೆ ಮಗಳು ಸತ್ತಿದ್ದಾಳೆ ಅನ್ನೋ ಸುದ್ದಿ ತಿಳಿದಿದೆ.
ನೇಹಾ ತಂದೆ ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದಾರೆ. ತಂದೆ ತಾಯಿಗೆ ನೇಹಾ ಒಬ್ಬಳೇ ಮಗಳು. ನೇಹಾಗೆ ಅಪ್ಪ ಅಮ್ಮನ ಜೊತೆ ಬೆಂಗಳೂರಿನಲ್ಲಿರೋದಕ್ಕೆ ಆಸೆ ಇತ್ತಂತೆ. ಹೀಗಾಗಿ ಮೂರು ವರ್ಷದ ಅಗ್ರಿಮೆಂಟ್ ಇದ್ರೂ ಒಂದೂವರೆ ವರ್ಷಕ್ಕೆ ಕೆಲಸ ಬಿಟ್ಟು ವಾಪಸ್ ಬೆಂಗಳೂರಿಗೆ ಬಂದಿದ್ಳು. ಬೆಂಗಳೂರಲ್ಲಿ ಎಂಟು ತಿಂಗಳು ಕಾಲ ಕೆಲಸಕ್ಕಾಗಿ ಅಲೆದಾಡಿ ಹುಡುಕಾಡಿ ಕೊನೆಗೆ ಎಲ್ಲೂ ಕೆಲಸ ಸಿಗದೇ ನಿರಾಸೆಗೊಂಡಿದ್ಳು. ಆದ್ರೆ ಬೆಂಗಳೂರಿನಲ್ಲಿ ಅವಳಂದುಕೊಂಡಂತ ಕೆಲಸ ಸಿಕ್ಕಿರಲ್ಲಿಲ್ಲ. ಹೀಗಾಗಿ ಕನಸಿನ ಮೂಟೆ ಹೊತ್ತು ಅನಿವಾರ್ಯ ಕಾರಣಗಳಿಂದ ಓಡಿಶಾಗೆ ಹೋಗಿ ಕೆಲಸ ಮಾಡ್ತಿದ್ಳು. ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡ್ತಿದ್ಳು.
ಸದ್ಯ ಡೆತ್ ನೋಟ್ ಒಂದು ಸಿಕ್ಕಿದ್ದು, ಡೆತ್ ನೋಟ್ನಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಇದೆ. ಓಡಿಶಾದಲ್ಲಿ ದೂರು ದಾಖಲಾಗಿದ್ದು, ಮಹಜರು ಕೆಲಸ ಎಲ್ಲ ಮುಗಿದಿದೆ. ಪೊಲೀಸರು ನಿಗೂಢ ಸಾವಿನ ತನಿಖೆ ನಡೆಸುತ್ತಿದ್ದಾರೆ.