newsics.com
ಭೂಮಿಯ ಮೇಲಿನ ಅತ್ಯಂತ ಪುರಾತನ, ಸುಂದರವಾದ ಉಡುಗೆ ಎಂದರೆ ಸೀರೆ. ಸೀರೆ ನಿಜಕ್ಕೂ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಹೆಚ್ಚಾಗಿ ಮಹಿಳೆಯರು ಸೀರೆಯನ್ನು ಉಡುತ್ತಾರೆ. ಇನ್ನೂ ವಿದೇಶೀಯರು ಕೂಡ ಭಾರತೀಯ ಸಂಸ್ಕೃತಿ, ಪರಂಪರೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಲೇಷ್ಯಾದ ಬಾಟು ಗುಹೆಯಲ್ಲಿ ಸೀರೆ ಧರಿಸಿದ್ದ ಇಬ್ಬರು ಚೀನೀ ಭಾರತೀಯ ನಾರಿಯರಂತೆ ಸೀರೆ ಉಟ್ಟು ಸುತ್ತಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಭಾರತೀಯ ವ್ಲಾಗರ್ ತನ್ನ ಯೂಟ್ಯಬ್ ಶಾರ್ಟ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಮಲೇಷ್ಯಾದ ಬಾಟು ಗುಹೆಯಲ್ಲಿ ಸೀರೆ ಧರಿಸಿದ್ದ ಇಬ್ಬರು ಚೀನೀ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.
ಈ ಚೀನೀ ಮಹಿಳೆಯರು ಸೀರೆಯಲ್ಲಿ ಗೊಂಬೆಗಳಂತೆ ಕಂಡಿದ್ದಾರೆ, ಫೋಟೋ ಕ್ಲಿಕಿಸಿ ಸಂಭ್ರಮಿಸಿದ್ದಾರೆ. ಭಾರತೀಯ ವ್ಲಾಗರ್ ತನ್ನ ಯೂಟ್ಯೂಬ್ನಲ್ಲಿ ಚೀನೀ ಜನರು ಸೀರೆ ಉಡುತ್ತಿದ್ದಾರೆ ಎಂದು ಹೇಳಿದ್ದಾರೆ . ಈ ವ್ಲಾಗರ್ ಆ ಮಹಿಳೆಯರನ್ನು ನೋಡಿ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೊಗಳಿದ್ದಾನೆ. ಇದಕ್ಕೆ ಚೀನೀ ಮಹಿಳೆಯರು ನಗುತ್ತಾ ಉತ್ತರಿಸುತ್ತಾರೆ.