newsics.com
ಬ್ರಿಟನ್: ಕಳೆದ 90 ವರ್ಷಗಳಿಂದ ವಿಚಿತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಹಳ್ಳಿಯೊಂದರಲ್ಲಿ ಬಟ್ಟೆ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ.
ಹೌದು ಈ ವಿಶಿಷ್ಟ ನಿಯಮ ಬ್ರಿಟನ್ನ ಹರ್ಟ್ಫೋರ್ಡ್ಶೈರ್ನಲ್ಲಿರುವ ಸ್ಪೀಲ್ಪ್ಲಾಟ್ಜ್ ಎಂಬ ಗ್ರಾಮದ ಜನರು ಬಟ್ಟೆಗಳನ್ನು ಧರಿಸದೆ ಜೀವನ ನಡೆಸುತ್ತಾರೆ. ಈ ಸಂಪ್ರದಾಯವು 1929ರಲ್ಲಿ ಐಸೋಲ್ಟ್ ರಿಚರ್ಡ್ಸನ್ರ ತಂದೆಯಿಂದ ಸ್ಥಾಪಿತವಾಯಿತು. ಸ್ಪೀಲ್ಪ್ಲಾಟ್ಜ್ ಎಂದರೆ ಜರ್ಮನ್ ಭಾಷೆಯಲ್ಲಿ ‘ಆಟದ ಮೈದಾನ’ ಎಂದರ್ಥ. ಈ ಗ್ರಾಮದಲ್ಲಿ ಮಕ್ಕಳಿಂದ ವೃದ್ಧರವರೆಗೆ ಯಾರೂ ಬಟ್ಟೆ ಧರಿಸುವುದಿಲ್ಲ.
ಈ ಗ್ರಾಮದ ಜನರು ಬಡವರಲ್ಲ. ಇವರ ಬಳಿ ಎರಡು ಕೋಣೆಯ ಬಂಗಲೆಗಳು, ಈಜುಕೊಳಗಳು ಮತ್ತು ಆಧುನಿಕ ಸೌಲಭ್ಯಗಳಿವೆ. ಆದರೆ, ಸಂಪ್ರದಾಯ ಮತ್ತು ನಂಬಿಕೆಯಿಂದಾಗಿ, ಇವರು ಬಟ್ಟೆಗಳನ್ನು ತೊಡದಿರಲು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಿತ್ರ ಜೀವನಶೈಲಿಯಿಂದಾಗಿ ಸ್ಪೀಲ್ಪ್ಲಾಟ್ಜ್ ಪ್ರಪಂಚದಾದ್ಯಂತ ಗಮನ ಸೆಳೆದಿದೆ. ಇದರ ಕುರಿತು ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳು ಸಹ ನಿರ್ಮಾಣವಾಗಿವೆ.
ಇಲ್ಲಿ ವಾಸಿಸುವ ಜನರು ಉತ್ತಮ ವಿದ್ಯಾವಂತರು ಮತ್ತು ಶ್ರೀಮಂತರು. ಸಾಮಾನ್ಯ ಜನರಂತೆ ಈ ಗ್ರಾಮದ ಜನರು ಕೂಡ ಕ್ಲಬ್, ಪಬ್, ಈಜುಕೊಳಗಳನ್ನು ಇಷ್ಟಪಡುತ್ತಾರೆ. ಆದರೆ, ಈ ಜನರು ಬಟ್ಟೆ ಖರೀದಿಸುವುದಿಲ್ಲ ಅಥವಾ ಧರಿಸುವುದಿಲ್ಲ. ಮಕ್ಕಳು-ವೃದ್ಧರು, ಹೆಂಗಸರು-ಪುರುಷರು, ಎಲ್ಲರೂ ಬಟ್ಟೆಯಿಲ್ಲದೆ ಇಲ್ಲಿ ವಾಸಿಸುತ್ತಿದ್ದಾರೆ. ಇದು ಅವರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಿಲ್ಲ. ಆದರೆ ಹಳ್ಳಿಯಿಂದ ನಗರಕ್ಕೆ ಹೋಗುವಾಗ ಜನರು ಬಟ್ಟೆ ಧರಿಸುತ್ತಾರೆ ಆದರೆ ಅವರು ಹಿಂದಿರುಗಿದ ತಕ್ಷಣ ಅವರು ಮತ್ತೆ ಬಟ್ಟೆ ಇಲ್ಲದೆ ಬದುಕಲು ಪ್ರಾರಂಭಿಸುತ್ತಾರೆ.