newsics.com
ಬೆಂಗಳೂರು: ಸರ್ಜಾಪುರ ರಸ್ತೆ ಹಾಗೂ ಓಆರ್‌ಆರ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರೆಸ್ಟೀಜ್ ಗ್ರೂಪ್ ಮೇಲ್ಸೇತುವೆ ನಿರ್ಮಿಸಲಿದೆ. ಈ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಗ್ರೀನ್ ಸಿಗ್ನಲ್ ನೀಡಲಾಗಿದೆ.
ನಗರದ ಸರ್ಜಾಪುರ ರಸ್ತೆ ಮತ್ತು ಹೊರ ವರ್ತುಲ ರಸ್ತೆಯಲ್ಲಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ‘ಪ್ರೆಸ್ಟೀಜ್ ಗ್ರೂಪ್’ ಮಹತ್ವದ ಯೋಜನೆಗೆ ಮುಂದಾಗಿದೆ. ಈ ಸಂಸ್ಥೆ 1.5 ಕಿಲೋಮೀಟರ್ ಉದ್ದದ ಮೇಲ್ಸೇತುವೆ ನಿರ್ಮಿಸಲು ತನ್ನ ಸ್ವಂತ ಖರ್ಚಿನಲ್ಲಿ ಮುಂದಾಗಿದೆ, ಮತ್ತು
ಪ್ರೆಸ್ಟೀಜ್ ಗ್ರೂಪ್ ಬೆಳ್ಳಂದೂರಿನಲ್ಲಿ ಟೆಕ್ ಪಾರ್ಕ್ ನಿರ್ಮಾಣ ಮಾಡಲಿದೆ, ಇದರಿಂದ ಆ ಭಾಗದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಈ ಮೇಲ್ಸೇತುವೆ ಸರ್ಜಾಪುರ ರಸ್ತೆಯಿಂದ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ ಸಂಪರ್ಕ ಕಲ್ಪಿಸುವಂತೆ ನಿರ್ಮಾಣವಾಗಲಿದೆ. ಯೋಜನೆಯ ಅಂದಾಜು ವೆಚ್ಚ ₹200 ಕೋಟಿ ಎಂದು ನಿರೀಕ್ಷಿಸಲಾಗಿದೆ, ಮತ್ತು ಈ ಸಂಪೂರ್ಣ ವೆಚ್ಚವನ್ನು ಪ್ರೆಸ್ಟೀಜ್ ಗ್ರೂಪ್ ಭರಿಸಲಿದೆ.
ಪ್ರೆಸ್ಟೀಜ್ ಗ್ರೂಪ್ ತನ್ನ ಖಾಸಗಿ ಕ್ಯಾಂಪಸ್‌ಗೆ ಮೀಸಲಾದ ಮೇಲ್ಸೇತುವೆಯನ್ನು ನಿರ್ಮಿಸಲು ಆಗಸ್ಟ್ 2022 ರಲ್ಲಿ ಮೊದಲ ಬಾರಿಗೆ ಬಿಬಿಎಂಪಿಯನ್ನು ಅನುಮತಿಗಾಗಿ ಮನವಿ ಸಲ್ಲಿಕೆ ಮಾಡಿತ್ತು. ನಂತರ ನವೆಂಬರ್ 2023 ರಲ್ಲಿ ಮತ್ತೆ ಪ್ರಸ್ತಾಪ ಸಲ್ಲಿಸಿತ್ತು. ಪ್ರಸ್ತಾವನೆಯಲ್ಲಿ, ಎರಡು ಮುಖ್ಯ ರಸ್ತೆಗಳಲ್ಲಿ (ಓಲ್ಡ್ ಏರ್‌ಪೋರ್ಟ್ ರಸ್ತೆ ಮತ್ತು ಕರಿಯಮ್ಮನ ಅಗ್ರಹಾರ ರಸ್ತೆ) ಟ್ರಾಫಿಕ್ ಜಾಮ್ ಬಗ್ಗೆ ಕಂಪೆನಿ ಕಳವಳ ವ್ಯಕ್ತಪಡಿಸಿತ್ತು. ಈ ರಸ್ತೆಗಳು ಪ್ರೆಸ್ಟೀಜ್ ಬೀಟಾ ಟೆಕ್ ಪಾರ್ಕ್‌ಗೆ ಪ್ರಸ್ತುತ ಪ್ರವೇಶವನ್ನು ಒದಗಿಸುತ್ತವೆ. ಇಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುವ ನಿರೀಕ್ಷೆಯಿದೆ.ಈ ಯೋಜನೆಗೆ ಏಪ್ರಿಲ್ ತಿಂಗಳಲ್ಲಿ ಅನುಮೋದನೆ ಸಿಕ್ಕಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ನಂತರ ಅನುಮತಿ ನೀಡಲಾಗಿದೆ