newsics.com
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಭವ್ಯಾ ಗೌಡ ಸಖತ್ ಖುಷಿಯಲ್ಲಿ ಇದ್ದಾರೆ.ಕನ್ನಡ ಕಿರುತೆರೆಗೆ ಗೀತಾ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟು, ಬಿಗ್ಬಾಸ್ನಿಂದ ಅಪಾಯ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ ಎಂದರೆ ಅದು ಭವ್ಯಾ ಗೌಡ.
ಬಿಗ್ಬಾಸ್ 11ರ ಬಳಿಕ ಭವ್ಯಾ ಗೌಡ ಕರ್ಣ ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ನಟಿ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಂಡಿದ್ದಾರೆ.ಸೀರಿಯಲ್ ಶೂಟಿಂಗ್ ಬ್ಯುಸಿ ನಡುವೆಯೂ ನಟಿ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಳ್ಳುವ ಸಾಹಸ ಮಾಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಿಲ್ಕ್ ಸೀರೆಯನ್ನು ತೊಟ್ಟುಕೊಂಡು ಭವ್ಯಾ ಗೌಡ ಕಿವಿ ಚುಚ್ಚಿಸಿಕೊಳ್ತಿದ್ದಾರೆ.
ಕೈ ಮುಗಿದು, ಕಣ್ಣು ಮುಚ್ಚಿರುವ ಅವರು ಒಂದು ಬುಲೆಟ್ ಬೀಳ್ತಿದ್ದಂತೆ ಅಯ್ಯೋ, ಅಮ್ಮ ಅಂತ ಕಿರುಚಿದ್ದಾರೆ. ಮತ್ತೊಂದು ಕಿವಿ ಚುಚ್ಚುವಾಗಲೂ ಭವ್ಯಾ ಗೌಡ ತಡಕಾಡಿದ್ದಾರೆ. ಇದೇ ವಿಡಿಯೋ ವೈರಲ್ ಆಗುತ್ತಿದೆ.
https://www.instagram.com/reel/DLzJe4nvLrU/?igsh=MXZtajQ4ZnhjZ254eQ==