newsics.com
ಇಂದು (ಜುಲೈ 7) ಸೋಮವಾರ. ಚಂದ್ರಾಧಿ ಯೋಗ, ಚತುರ್ಥ ದಶಮ ಯೋಗ, ಸಮಸಪ್ತಕ ಯೋಗ, ಸರ್ವಾರ್ಥ ಸಿದ್ಧಿ ಯೋಗದ ಜತೆ ಇನ್ನೂ ಹಲವು ಶುಭ ಸಂಯೋಜನೆಯಿಂದ ಕೂಡಿದ ದಿನವಾಗಿದ್ದು, ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಇದರಿಂದ ಐದು ರಾಶಿಗಳ ಜನರಿಗೆ ಶುಭ ಯೋಗ ಪ್ರಾಪ್ತವಾಗಲಿದೆ.
ವೃಷಭ ರಾಶಿಗೆ ಸೇರಿದವರಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಲಾಭ ದೊರಕುವುದು. ಶಿವನ ಕೃಪೆಯಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ಸಾಕಷ್ಟು ಅನುಕೂಲಗಳನ್ನು ಪಡೆಯುವಿರಿ. ನಿಮ್ಮ ಸಂಗಾತಿಯೊಂದಿಗೆ ವ್ಯಾಪಾರದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸುವಿರಿ. ನಿಮಗೆ ಬೇರೆಯವರ ಸಂಪರ್ಕದಿಂದ ಹೆಚ್ಚಿನ ಪ್ರಯೋಜನಗಳಾಗಲಿವೆ. ಸಂಬಂಧಗಳು ಬಲಗೊಳ್ಳುವುದು. ಪರಸ್ಪರರ ನಡುವೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗಲಿದೆ. ಇದರೊಂದಿಗೆ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುವುದು. ನಿಮ್ಮ ಸಂಗಾತಿಯ ಹೆಸರಿನಲ್ಲಿ ಹೊಸ ಕೆಲಸವನ್ನು ಶುರು ಮಾಡುವುದರಿಂದ ಅಥವಾ ಹೂಡಿಕೆ ಮಾಡುವುದರಿಂದ ಸಾಕಷ್ಟು ಶುಭವಾಗುವುದು. ನಿಮ್ಮ ಸಂಬಂಧಗಳು ಉತ್ತಮವಾಗಿರುವುದು. ನಿಮ್ಮ ಪ್ರೇಮ ಸಂಬಂಧ ದೃಷ್ಟಿಯಿಂದ ಅನುಕೂಲಕರವಾಗಿರಲಿದೆ. ನೀವು ರೋಮ್ಯಾಂಟಿಕ್ ಕ್ಷಣಗಳನ್ನು ಕಳಿಯುವ ಅವಕಾಶ ಲಭಿಸುವುದು. ನಿಮ್ಮ ಸಂಗಾತಿಯೊಂದಿಗೆ ಅವಿಸ್ಮರಣಿಯವಾದ ಸಮಯವನ್ನು ಕಳೆಯುವಿರಿ. ಮನೆಯಲ್ಲಿ ಹೊಸ ಸಂತೋಷ ನೆಲೆಸುವುದು.
ಸಿಂಹ ರಾಶಿಗೆ ಸೇರಿದ ನಿಮಗೆ ಉತ್ತಮ ಫಲಿತಾಂಶ ದೊರಕುವುದು. ಮನೆಯವರ ಸಂಪೂರ್ಣ ಬೆಂಬಲ ಮತ್ತು ಪ್ರೀತಿ ದೊರಕುವುದು. ನಿಮ್ಮ ಕೆಲಸಗಳಲ್ಲಿ ತಾಯಿಯ ಆಶೀರ್ವಾದ ಲಭಿಸಲಿದೆ. ಅವರ ಸಹಾಯದಿಂದ ಆರ್ಥಿಕ ಲಾಭ ದೊರಕುವುದು. ತಾಯಿಯ ಸಂಪೂರ್ಣ ಬೆಂಬಲ ದೊರಕಲಿದೆ. ಅತ್ತೆ ಮಾವನವರಿಂದ ವ್ಯಾಪಾರದಲ್ಲಿ ಸಹಾಯ ದೊರಕುವುದು. ಮಾನಸಿಕವಾಗಿ ನೀವು ಸಾಕಷ್ಟು ಬಲದಿಂದಿರುವಿರಿ. ರಿಯಲ್ ಎಸ್ಟೇಟ್ ಮತ್ತು ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದವರಿಗೆ ಉತ್ತಮ ದಿನವಾಗಿರುವುದು. ಟ್ರಾನ್ಸ್ಪೋರ್ಟೇಶನ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಲಭಿಸಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ. ಸಂಪತ್ತಿಗೆ ಸಂಬಂಧಿಸಿದಂತಹ ಸಮಸ್ಯೆಗಳು ದೂರವಾಗುವವು. ಮನೆಯಲ್ಲಿ ಸುಖ, ಶಾಂತಿ ನೆಲೆಸಲಿದೆ. ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುವುದು.
ಕನ್ಯಾ ರಾಶಿಯವರಿಗೆ ಸೋಮವಾರ ಅತ್ಯುತ್ತಮವಾಗಿರಲಿದೆ. ಶಿವನ ಕೃಪೆಯಿಂದಾಗಿ ಕೆಲಸಗಳೆಲ್ಲವೂ ಪೂರ್ಣಗೊಳ್ಳುವವು. ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ವಿರೋಧಿಗಳ ವಿರುದ್ಧ ಜಯ ಗಳಿಸುವಿರಿ. ನಿಮ್ಮ ಎಲ್ಲಾ ರೀತಿಯ ಯೋಜನೆಗಳಲ್ಲಿ ಮತ್ತು ನಿರ್ಧಾರಗಳಿಂದಾಗಿ ಉತ್ತಮ ಲಾಭ ದೊರಕುವುದು. ಮಾಧ್ಯಮ, ಶಿಕ್ಷಣ, ಕೋಚಿಂಗ್, ಮಾರ್ಕೆಟಿಂಗ್ ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಹೆಚ್ಚಿನ ಲಾಭ ದೊರಕುವುದು. ನಿಮ್ಮ ಮಾತಿನ ಕೌಶಲ್ಯದಿಂದ ಹೆಚ್ಚಿನ ಯಶಸ್ಸನ್ನು ಗಳಿಸುವಿರಿ. ಶೋಧ, ಲೇಖನ, ಮುದ್ರಣ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ವಿಶೇಷವಾಗಿ ಯಶಸ್ಸು ದೊರಕುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಲ್ಪ ದೂರ ಪ್ರಯಾಣಿಸುವ ಯೋಗವಿದೆ. ಈ ಪ್ರಯಾಣವು ಯಶಸ್ಸಿನಿಂದ ಕೂಡಿರುವುದು. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲಿದೆ. ನಿಮ್ಮ ಕಿರಿಯ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ದೊರಕುವುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರಲಿದೆ.
ತುಲಾ ರಾಶಿಯವರಿಗೆ ಇಂದು ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಧನ ಪ್ರಾಪ್ತಿ ಆಗಲು ಹೊಸ ಅವಕಾಶಗಳು ದೊರಕುವವು. ಪ್ರಭಾವಶಾಲಿ ವ್ಯಕ್ತಿಗಳ ಸಹಾಯದಿಂದಾಗಿ ಹೆಚ್ಚಿನ ಲಾಭ ಗಳಿಸುವಿರಿ. ಹೂಡಿಕೆ ಯೋಜನೆಗಳನ್ನು ರೂಪಿಸುವಿರಿ. ಹಣವನ್ನು ಸರಿಯಾದ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ದೊರಕುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ದಿನವಾಗಿರಲಿದೆ. ಬ್ಯೂಟಿ ಪಾರ್ಲರ್, ಸಲೂನ್, ಕಾಸ್ಮೆಟಿಕ್, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಹೆಚ್ಚು ಲಾಭದಾಯಕವಾಗಿರುವುದು. ನಿಮ್ಮ ಧನ ಸಂಪತ್ತನ್ನು ಹೆಚ್ಚಿಸಲು ನೀವು ಸಾಕಷ್ಟು ಪ್ರಯತ್ನವನ್ನು ಮಾಡುವಿರಿ. ಕೆಲಸವನ್ನು ಮಾಡುವ ಜನರು ಸ್ಥಾನ ಬದಲಾವಣೆಗಾಗಿ ಮಾಡಿದಂತಹ ಪ್ರಯತ್ನಗಳಿಂದಾಗಿ ಹೆಚ್ಚಿನ ಲಾಭ ಪಡೆಯುವರು. ಮನೆಯಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುವುದು. ಮಾನಸಿಕವಾಗಿ ನೀವು ಉತ್ತಮ ಸಂಬಂಧವನ್ನು ಹೊಂದುವಿರಿ.
ಕುಂಭ ರಾಶಿಗೆ ಸೇರಿದ ಜನರಿಗೆ ಈ ದಿನ ಬಹಳ ವಿಶೇಷವಾಗಿದೆ. ನಿಮ್ಮ ಕಚೇರಿ ಕೆಲಸಗಳನ್ನು ಸಮರ್ಥವಾಗಿ ಪೂರ್ಣ ಗೊಳಿಸುವಿರಿ. ನಿಮ್ಮ ಗಮನ ಹಾಗೂ ಕಠಿಣ ಪರಿಶ್ರಮದಿಂದಾಗಿ ಉನ್ನತ ಅಧಿಕಾರಿಗಳು ಸಂತೋಷ ಹೊಂದುವರು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಸಾಕಷ್ಟು ಯಶಸ್ಸು ದೊರಕುವುದು. ನಿಮಗೆ ಉನ್ನತ ಪದವಿ ದೊರಕುವ ಯೋಗವಿದೆ. ಸರ್ಕಾರಿ ಕೆಲಸ ದೊರಕುವ ಯೋಗವೂ ಇದೆ. ನಿಮ್ಮ ಸಾಮಾಜಿಕ ಸಂಪರ್ಕಗಳು ಹೆಚ್ಚಾಗಲಿವೆ. ನೀವು ದೊಡ್ಡ ಯಶಸ್ಸನ್ನು ಗಳಿಸುವ ಯೋಗವಿದೆ. ರಾಜಕೀಯ ಮತ್ತು ಸಮಾಜ ಸೇವೆಗೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಲಾಭದಾಯಕವಾಗಿರುವುದು. ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುವುದು. ನಿಮ್ಮ ಸಂಗಾತಿಯೊಂದಿಗೆ ಯಾವುದಾದರೂ ವಿಷಯಕ್ಕೆ ಮನಸ್ತಾಪಗಳಿದ್ದರೆ ಅವೆಲ್ಲವೂ ದೂರವಾಗಿ, ನಿಮ್ಮ ಸಂಬಂಧ ಬಲಗೊಳ್ಳಲಿದೆ. ಮಕ್ಕಳಿಂದ ನಿಮಗೆ ಶುಭ ಸುದ್ದಿ ಲಭಿಸುವ ಯೋಗವಿದೆ.
Today’s prediction ಇಂದಿನ ರಾಶಿ ಭವಿಷ್ಯ, 07-07-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?