newsics.com
ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನೆಗೆ ಶುಭ ಆಷಾಢ ಶುಕ್ರವಾರದಂದೇ ನಮ್ಮ ಮನೆಗೆ ಹೊಸ ಸದಸ್ಯಳ ಆಗಮನವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಮನೆಗೆ ಹೆಣ್ಣು ಕರುವೊಂದರ ಆಗಮನವಾಗಿದ್ದು, ಅದನ್ನು ತೇಜಸ್ವಿ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ತಮ್ಮ ಸುಮಧುರ ಕಂಠದಲ್ಲಿ ಕೃಷ್ಣ ಕೃಷ್ಣ ಗೋವಿಂದ, ಜನಾರ್ಧನ … ಹಾಡು ಸಾಕಷ್ಟು ಇಂಪಾಗಿ ಹಾಡಿದ್ದು, ಆಕಳಿಗೆ ಮೇವನ್ನು ನೀಡಿ, ಮೈ ಸವರುತ್ತಾ ಹಾಡಿದ್ದಾರೆ.. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಬಗ್ಗೆ ತೇಜಸ್ವಿ ಸೂರ್ಯ, ಇಂದು, ಶುಭ ಆಷಾಢ ಶುಕ್ರವಾರದಂದು, ನಮ್ಮ ಕುಟುಂಬಕ್ಕೆ ಹೊಸ ಸದಸ್ಯಳನ್ನು ಸ್ವಾಗತಿಸಿದೆವು. ನಾವು ಅವಳನ್ನು ಗೌರಿ, ಲಕ್ಷ್ಮಿ, ರಾಧೆ ಹೀಗೆಲ್ಲ ಹೆಸರುಗಳಿಂದ ಕರೆಯುತ್ತಿದ್ದೇವೆ. ಅವಳು ತುಂಬಾ ದೈವಿಕಳಾಗಿದ್ದು, ಹಾಡನ್ನು ಇಷ್ಟಪಡುತ್ತಾಳೆ ಬರೆದುಕೊಂಡಿದ್ದಾರೆ.
https://www.instagram.com/reel/DLsZEI8SF2h/?igsh=NjI1dW15dGt5bXZo