newsics.com
ಬೀದರ್: ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಬೀಗರು ಗಲಾಟೆ ಮಾಡಿಕೊಂಡಿರೋ ಘಟನೆ ತಡರಾತ್ರಿ ಔರಾದ್ ತಾಲೂಕಿನ ಭೋಂತಿ ತಾಂಡಾದಲ್ಲಿ ನಡೆದಿದೆ.
ಶಾಸಕ ಪ್ರಭು ಚೌಹಾಣ್ ಅವರ ಮಗ ಪ್ರತೀಕ್ ಚೌಹಾಣ್ ನಿಶ್ಚಿತಾರ್ಥ ಮಹಾರಾಷ್ಟ್ರದ ಉದ್ದಗೀರ್ ಯುವತಿಯೊಂದಿಗೆ ಆಗಿತ್ತು. ಆದರೆ ಮದುವೆ ಅನೇಕ ಕಾರಣಗಳಿಂದ ಲೇಟ್ ಆಗುತ್ತಿತ್ತು. ಇದರಿಂದಾಗಿ ಭಾವೀ ಬೀಗರು ಹಾಗೂ ಶಾಸಕರ ಸಂಬಂಧಿಕರ ನಡುವೆ ವಾಗ್ವಾದ ನಡೆದಿದೆ. ಆದರೆ ಈ ಜಗಳ ತಾರಕ್ಕೇರಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಘಟನೆ ವಿಕೋಪಕ್ಕೆ ತಿರುಗಿದ್ದು ಇಬ್ಬರೂ ಕಡೆಯವರು ಹೊಡೆದಾಡುವ ಮಟ್ಟಕ್ಕೆ ಹೋಗಿದೆ. ಈ ಘಟನೆಯಿಂದ ಕೆಲ ಸಂಬಂಧಿಕರಿಗೆ ಗಾಯ ಸಹ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಪ್ರದೀಪ್ ಭೇಟಿ ನೀಡಿದ್ದಾರೆ.