newsics.com
ಕೊಡೆಯಿಡ ಎಂಬ ಧಾರಾವಾಹಿಯ ಮೂಲಕ ಮಲಯಾಳಂ ಪ್ರೇಕ್ಷಕರ ಗಮನ ಸೆಳೆದ ಪ್ರಾರ್ಥನಾ ಕೃಷ್ಣನ್ ನಾಯರ್, ತಮ್ಮ ಆಪ್ತ ಸ್ನೇಹಿತೆಯಾದ ಅನ್ಸಿಯಾ ಜೊತೆಗೆ ಮದುವೆಯಾಗಿದ್ದಾರೆ.
ದೇವಸ್ಥಾನವೊಂದರಲ್ಲಿ ಪರಸ್ಪರ ತಾಳಿ ಹಾಕುವುದು, ಹಾರ ಬದಲಾಯಿಸುವುದನ್ನು ಪ್ರಾರ್ಥನಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಮನಸ್ಸಿನಲ್ಲಿ ವಿಷ ತುಂಬಿದ, ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಬರೆದುಕೊಂಡಿದ್ದಾರೆ. ಅನ್ಸಿಯಾ ಲೆಸ್ಬಿಯನ್.. ಮೈ ಲವ್.. ಡ್ರೀಮ್ ಕಮ್ ಟ್ರೂ ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಅನ್ಸಿಯಾ ಹಂಚಿಕೊಂಡಿದ್ದಾರೆ.
ಈ ಹಿಂದೆ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವ ವಿವಾದಕ್ಕೆ ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟ ಮಾಡಿತ್ತು. ಸಲಿಂಗಿಗಳಿಗೆ ವಿವಾಹ ಅನ್ನೋದು ಮೂಲಭೂತ ಹಕ್ಕು ಅಲ್ಲ. ಸಲಿಂಗಿಗಳು ಜೊತೆಯಲ್ಲಿ ವಾಸ ಮಾಡಬಹುದು. ಸಲಿಂಗಿಗಳ ವಿವಾಹದ ಹಕ್ಕಿಗೆ ಸುಪ್ರೀಂಕೋರ್ಟ್‌ನಲ್ಲಿ ಮನ್ನಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
https://www.instagram.com/p/DLeem5uz_3X/?igsh=cnh0aGtwejd5MzFj