newsics.com
ಶಿವಮೊಗ್ಗ: ಹೊಸೂರು ಗ್ರಾ.ಪಂ. ವ್ಯಾಪ್ತಿಯ ಚಿಪ್ಪಳಿ ಗ್ರಾಮದ ರೈತ ಎಚ್.ಆರ್. ಗುರುನಾಥ ಅವರು ತಮ್ಮ ಊರಿನಲ್ಲಿರುವ ನಂದಿಹೊಳೆಗೆ ಸ್ವಂತ ಖರ್ಚಿನಲ್ಲಿ 60 ಅಡಿ ಉದ್ದ, 3 ಅಡಿ ಅಗಲದ ಕಬ್ಬಿಣದ ಕಾಲುಸಂಕ ನಿರ್ಮಿಸಿದ್ದಾರೆ.
ಚಿಪ್ಪಳಿ ಗ್ರಾಮದಿಂದ ಬ್ಯಾಡರಕೊಪ್ಪ ಸಂಪರ್ಕಿಸುವ ಮಾರ್ಗದಲ್ಲಿ ಹೊಳೆಯ ಎರಡೂ ದಡಕ್ಕೆ ಕಾಲು ಸಂಕ ಅಳವಡಿಸಲಾಗಿದೆ.
ಬ್ಯಾಡರಕೊಪ್ಪ ಗ್ರಾಮದ ರೈಲ್ವೆ ಅಂಡರ್ ಪಾಸ್ ಬಳಿ ಈ ರಸ್ತೆ ಸಂಪರ್ಕಿಸುತ್ತದೆ. ಇದರಿಂದ ಬ್ಯಾಡರಕೊಪ್ಪ, ಜಂಬೂರಮನೆ, ಅಡ್ಡೇರಿ ಗ್ರಾಮ ಸೇರಿ ಸುಮಾರಿ 150ಕ್ಕೂ ಅಧಿಕ ಕುಟುಂಬಕ್ಕೆ ಈ ಕಾಲು ಸಂಕ ಉಪಯೋಗವಾಗಲಿದೆ.
2010ರಲ್ಲಿ ಬೇಳೂರು ಗೋಪಾಲಕೃಷ್ಣ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಈ ಹೊಳೆಗೆ ಕಿರು ಸೇತುವೆ
ಇದರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುಕೂಲವಾಗಿತ್ತು. ಆದರೆ, ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡದ ಕಾರಣ ಹೊಳೆಯ ರಭಸಕ್ಕೆ ಮಣ್ಣು ಕೊರಕಲಾಗಿ ಸೇತುವೆ ಬಳಸದಂತೆ ಆಗಿತ್ತು. ಅಲ್ಲದೆ, ಸೇತುವೆ ಕಾಮಗಾರಿ ಲೋಪದ ಕಾರಣ ಮಧ್ಯದ ಕಂಬ ಶಿಥಿಲಗೊಂಡು, 7-8 ವರ್ಷಗಳಿಂದ ಬಳಸದಂತೆ ಆಗಿತ್ತು. ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಜನ ಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.