newsics.com
ಈಗಂತೂ ದಿನ ಬೆಳಗಾದರೆ ಸಾಕು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದು ದೃಶ್ಯಗಳು ಎದೆ ಝಲ್ ಎನಿಸುವಂತಿರುತ್ತದೆ. ಇದೀಗ ಅಂತಹದ್ದೊಂದು ಆಘಾತಕಾರಿ ದೃಶ್ಯ ಇದೀಗ ವೈರಲ್ ಆಗಿದೆ.
ಪೊದೆಯ ಪಕ್ಕದಲ್ಲಿದ್ದ ತೊರೆಯಲ್ಲಿ ಸ್ನೇಹಿತರೊಂದಿಗೆ ನೀರಾಟ ಆಡ್ತಿದ್ದ ವೇಳೆ ಯುವಕನೊಬ್ಬನ ಮೇಲೆ ದೈತ್ಯ ಹಾವು ಅಟ್ಯಾಕ್ ಮಾಡಲು ಮುಂದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಡಿನ ಪಕ್ಕದಲ್ಲಿರುವ ತೊರೆಯಲ್ಲಿ ಒಂದಷ್ಟು ಯುವಕರು ನೀರಾಟ ಆಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ವೇಳೆ ಪೊದೆಯಿಂದ ಮೆಲ್ಲನೆ ಹೊರ ಬಂದಂತಹ ದೈತ್ಯ ಹಾವೊಂದು ಪೊದೆಯ ಪಕ್ಕದಲ್ಲೇ ಕುಳಿತಿದ್ದ ಯುವಕನ ಮೇಲೆ ಅಟ್ಯಾಕ್ ಮಾಡಿದೆ. ಹಾವನ್ನು ಕಂಡ ತಕ್ಷಣ ಯುವಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ.
https://www.instagram.com/reel/DLsAohSOFSg/?igsh=MThnMXI4eHNzZzUwcQ==