newsics.com
ಲಖನೌ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕಾರು ಕಾಲೇಜಿನ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವರ ಸೇರಿದಂತೆ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು,ಇಬ್ಬರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಉತ್ತರ ಪ್ರದೇಶದ ಜೆವಾನೈ ಗ್ರಾಮದಲ್ಲಿನಡೆದಿದೆ.
ಜನತಾ ಇಂಟರ್ ಕಾಲೇಜು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಕಾಲೇಜಿನ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಾಹನದಲ್ಲಿ ಹತ್ತು ಜನರಿದ್ದರು. ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ಮೃತರಲ್ಲಿ 24 ವರ್ಷದ ವರ ಸೂರಜ್ ಕೂಡ ಸೇರಿದ್ದಾರೆ. ಸಂಭಾಲ್ ನ ಹರ್ ಗೋವಿಂದಪುರ ಗ್ರಾಮದಿಂದ ಬುಡೌನ್ ಜಿಲ್ಲೆಯ ಸಿರ್ತೌಲ್ ನಲ್ಲಿರುವ ವಧುವಿನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.