newsics.com
ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಈ ಮ್ಯಾಟ್ರಿಮೋನಿ ಸೈಟ್‌ಗಳಿಂದ ಹಲವರು ಮೋಸಕ್ಕೊಳಗಾದ ಉದಾಹರಣೆಗಳಿವೆ. ಆದರೂ ಮತ್ತೆ ಮತ್ತೆ ಜನರು ವಂಚನೆಗೊಳಗಾಗುತ್ತಿರೋದು ವಿಪರ್ಯಾಸ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ದಾವಣಗೆರೆಯ ಈ ಟೆಕ್ಕಿ ಮ್ಯಾಟ್ರಿಮೋನಿಯಲ್ಲಿ ಸಿಕ್ಕ ಹುಡುಗಿ ನಂಬಿ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ.
ಸಂಗಮ’ ಮೆಟ್ರಿಮೋನಿ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ ಟೆಕ್ಕಿಗೆ ಈ ಆ್ಯಪ್‌ನಲ್ಲಿ ಯುವತಿ ಪರಿಚಯವಾಗಿದ್ದಳು. ಮೆಸೇಜ್, ಫೋನ್ ಮಾಡ್ತಿದ್ದವಳು ಸರಿಯಾಗಿಯೇ ಮೋಸ ಮಾಡಿದ್ದಾರೆ. ಏಪ್ರಿಲ್ 24ರಂದು ಅಪರಿಚಿತ ನಂಬರ್‌ನಿಂದ ಟೆಕ್ಕಿಗೆ ವಾಟ್ಸಪ್ ಮೆಸೇಜ್ ಬಂದಿದೆ.
ಅಭಿನಯ ಎಂಬ ಪ್ರೊಫೈಲ್‌ನಿಂದ ಟೆಕ್ಕಿಗೆ ಪರಿಚಯವಾಗಿದ್ದ ಯುವತಿ. ತಾನು ಮೂಲತಃ ತಮಿಳುನಾಡಿನ ಚೆನ್ನೈನವಳಾಗಿದ್ದು ಮಲೇಶಿಯಾದಲ್ಲಿ ನೆಲೆಸಿದ್ದಾಗಿ ಹೇಳಿಕೊಂಡಿದ್ದಳು. ನಂತರ, ತಮ್ಮ ಪ್ರೊಫೈಲ್ ಇಷ್ಟವಾಗಿದೆ ಮದುವೆಯಾಗುವುದಾಗಿ ಹೇಳಿದ್ದ ಯುವತಿ. ತಾನು Global TRX ಎಂಬ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡು. ಆಸಕ್ತಿ ಇದ್ರೆ ನೀವು ಹೂಡಿಕೆ ಮಾಡಿ ಎಂದು ಲಿಂಕ್ ಕಳಿಸಿದ್ದಳಂತೆ.ಯುವತಿ ಮಾತು ನಂಬಿ ಲಿಂಕ್ ಕ್ಲಿಕ್ ಮಾಡಿದ ಟೆಕ್ಕಿ ಹಣ ವರ್ಗಾವಣೆ ಮಾಡಿದ್ದಾರೆ.
ಮೇ 4 ರಿಂದ ಮೇ 9ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ 9.34 ಲಕ್ಷ ವರ್ಗಾವಣೆ ಮಾಡಿದ್ರು. ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಮತ್ತೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಶೇಕಡಾ 5ರಷ್ಟು ಪ್ರೊಸೆಸಿಂಗ್ ಫೀ ಸಹ ವರ್ಗಾವಣೆ ಮಾಡಿದ್ದ ಟೆಕ್ಕಿ ಮೋಸ ಹೋಗಿದ್ದಾನೆ.
ಯುಎಸ್ ಡಾಲರ್‌ನಿಂದ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ರು. ಅನುಮಾನಗೊಂಡು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋಗಿದ್ದು ಆತನ ಗಮನಕ್ಕೆ ಬಂದಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ. ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.