newsics.com
ನವದೆಹಲಿ : ಜೈನ ಧರ್ಮಕ್ಕೆ ಹೆಸರುವಾಸಿಯಾಗಿರುವ ಪಾಲಿತಾನಾ ನಗರದಲ್ಲಿ ಸುಮಾರು 200 ಜೈನ ಸನ್ಯಾಸಿಗಳು ಈ ಹಿಂದೆ ಪ್ರತಿಭಟನೆ ನಡೆಸಿದ್ದು, ಇದೀಗ ಸರ್ಕಾರ ಈ ನಗರದಲ್ಲಿ ಮಾಂಸಾಹಾರದ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಹಿಂದೆ ಪಾಲಿತಾನಾದಲ್ಲಿ 250 ಮಾಂಸದ ಅಂಗಡಿಗಳಿದ್ದವು, ಈ ಅಂಗಡಿಗಳನ್ನು ಮುಚ್ಚುವಂತೆ ಸುಮಾರು 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು.
ಮಾಂಸದ ಮಾರಾಟ, ಸೇವನೆ ಮತ್ತು ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವುದು ಇನ್ನು ಮುಂದೆ ಇಲ್ಲಿ ಕಾನೂನುಬಾಹಿರ ಮತ್ತು ಕಾನೂನಿನಿಂದ ಶಿಕ್ಷಾರ್ಹವಾಗಿದೆ.
ಗುಜರಾತ್ನ ಭಾವನಗರ ಜಿಲ್ಲೆಯ ಪಾಲಿತಾನಾ ನಗರವು ಮಾಂಸಾಹಾರಿ ಆಹಾರದ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.